ಡಾಲಿ ಧನಂಜಯ್ ಮದುವೆಗಾಗಿ ಮೈಸೂರಿಗೆ ಬಂದ ‘ಪುಷ್ಪ’ ಮೇಕರ್ ಸುಕುಮಾರ್
ಬೆಂಗಳೂರು: ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ– ಡಾ.ಧನ್ಯತಾ ಮದುವೆ ನಡೆಯುತ್ತಿದೆ.
ಇಂದು ಮದುವೆ ಶಾಸ್ತ್ರದ ಕಾರ್ಯಕ್ರಮಗಳು ನಡೆದಿದ್ದು ಈಗಾಗಲೇ ಹಲವು ಗಣ್ಯರು, ಡಾಲಿ ಆಪ್ತರು ಮೈಸೂರಿಗೆ ಆಗಮಿಸಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ವಿಶೇಷವೆಂದರೆ ಟಾಲಿವುಡ್‌ನ ಖ್ಯಾತ ಸಿನಿಮಾ ಬರಹಗಾರ, ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದು, ಈಗಾಗಲೇ ಡಾಲಿ, ಸುಕುಮಾರ್ ಅವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾರೆ.
ಭಾನುವಾರ ಸುಕುಮಾರ್ ಅವರು ಡಾಲಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಪುಷ್ಪ–1, ಪುಷ್ಪ–2 ಸಿನಿಮಾದಲ್ಲಿ ಧನಂಜಯ್ ಅವರು ಜಾಲಿ ರೆಡ್ಡಿ ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ತಿಂಗಳು ಆರಂಭದಲ್ಲಿ ಧನಂಜಯ್ ಹೈದರಾಬಾದ್‌ಗೆ ತೆರಳಿ ಪುಷ್ಪ ಚಿತ್ರತಂಡವನ್ನು ಮದುವೆಗೆ ಆಹ್ವಾನಿಸಿದ್ದರು.
ಮಾಹಿತಿ– ಪ್ರಜಾವಾಣಿ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.