ADVERTISEMENT

ಪುಷ್ಪ–2: ಅಲ್ಲು ಅರ್ಜುನ್‌ ಎದುರು ಅಬ್ಬರಿಸಿ ಬೊಬ್ಬಿರಿವ ವಿಜಯ್‌ ಸೇತುಪತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 7:26 IST
Last Updated 5 ಜುಲೈ 2022, 7:26 IST
ವಿಜಯ್‌, ಅಲ್ಲು ಅರ್ಜುನ್‌
ವಿಜಯ್‌, ಅಲ್ಲು ಅರ್ಜುನ್‌   

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಪುಷ್ಪ‘ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಹೊಸ ಇತಿಹಾಸ ಬರೆದಿತ್ತು. ಇದೀಗ ಪುಷ್ಪ ಸಿನಿಮಾದ 2ನೇ ಭಾಗದ ಚಿತ್ರೀಕರಣದ ಕೆಲಸಗಳು ಆರಂಭವಾಗಿವೆ.

ದಾಖಲೆ ಬರೆದ ಈ ಸಿನಿಮಾದಲ್ಲಿಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂಮಲಯಾಳಂ ನಟ ಫಹಾದ್ ಫಾಸಿಲ್‌ ಅಭಿನಯ ಜನರಿಗೆ ಇಷ್ಟವಾಗಿತ್ತು. ಇದೀಗ ಚಿತ್ರತಂಡ ತಮಿಳಿನಖ್ಯಾತ ನಟ ವಿಜಯ್‌ ಸೇತುಪತಿ ಅವರನ್ನುಸೇರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಚಿತ್ರತಂಡದ ಅಧಿಕೃತ ಮೂಲಗಳ ಪ್ರಕಾರ ವಿಜಯ್‌ ಸೇತುಪತಿ ಪುಷ್ಪ–2 ಸಿನಿಮಾದ ಭಾಗವಾಗಲಿದ್ದಾರೆ. ಅವರಿಗೆ ಮುಖ್ಯ ಪಾತ್ರವೊಂದನ್ನು ನೀಡಲಾಗುತ್ತಿದೆ. ಇದರಲ್ಲಿ ವಿಜಯ್‌ ಸೇತುಪತಿ ಮುಖ್ಯ ವಿಲನ್‌ ಎನ್ನಲಾಗಿದೆ.

ಪುಷ್ಪ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರಲಿಲ್ಲ. 2ನೇ ಭಾಗದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಇನ್ನು ರಶ್ಮಿಕಾ ಮಂದಣ್ಣ ಕೂಡ ಸಿನಿಮಾದ ಭಾಗವಾಗಲಿದ್ದಾರೆ ಎಂದು ಚಿತ್ರತಂಡ ಖಚಿತಪಡಿಸಿದೆ. ಈ ಹಿಂದೆ ರಶ್ಮಿಕಾಗೆ ಪುಷ್ಪ–2ನಲ್ಲಿ ಪಾತ್ರ ಇರುವುದಿಲ್ಲ ಎಂಬ ಗಾಳಿ ಮಾತುಗಳು ಹರಿದಾಡಿದ್ದವು.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.