ADVERTISEMENT

ನಿಮ್ಮ ಉಪಸ್ಥಿತಿಯೇ ನನಗೆ ಉಡುಗೊರೆ: ಅಭಿಮಾನಿಗಳನ್ನು ಆಹ್ವಾನಿಸಿದ್ದೇಕೆ ರಚಿತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2025, 10:47 IST
Last Updated 2 ಅಕ್ಟೋಬರ್ 2025, 10:47 IST
<div class="paragraphs"><p>ಚಿತ್ರ ಕೃಪೆ:&nbsp;<strong><a href="https://www.instagram.com/rachita_instaofficial?hl=en">rachita_instaofficial</a></strong></p></div>

ಚಿತ್ರ ಕೃಪೆ: rachita_instaofficial

   

ಬೆಂಗಳೂರು: ಅಕ್ಟೋಬರ್ 3 ರಂದು ನಟಿ ರಚಿತಾ ರಾಮ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳನ್ನು ಪತ್ರದ ಮೂಲಕ ಆಹ್ವಾನಿಸಿದ್ದಾರೆ. ‘ನನ್ನ ಮನೆಯ ಬಳಿ ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಆಚರಿಸಿಕೊಳ್ಳಲು ಕಾಯುತ್ತಿದ್ದೇನೆ. ಇದು ಕೇವಲ ಹುಟ್ಟು ಹಬ್ಬದ ಆಚರಣೆ ಅಲ್ಲ ಇದು ನಮ್ಮ ಸಂಬಂಧದ ಸಂಭ್ರಮ‘ ಎಂದು ಪತ್ರದಲ್ಲಿ ಬರೆದು ಅಭಿಮಾನಿಗಳಿಗೆ ನಿಮ್ಮ ಉಪಸ್ಥಿತಿಯೇ ನನ್ನ ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.

ರಚಿತಾ ರಾಮ್ ಕೂಲಿ ಸಿನಿಮಾದ ಬಳಿಕ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿವೆ ಎಂದು ಮೂಲಗಳು ಮಾಹಿತಿ ತಿಳಿಸಿವೆ.

ADVERTISEMENT

ರಚಿತಾ ಅವರನ್ನು ರಗಡ್ ಲುಕ್‌ನಲ್ಲಿ ನೋಡಿರುವ ಅಭಿಮಾನಿಗಳು ಮುಂದಿನ ಸಿನಿಮಾ ಯಾವಾಗ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಈ ನಡುವೆ ಸ್ಟಾರ್ ನಟಿ ಅಭಿಮಾನಿಗಳನ್ನು ಜನ್ಮದಿನದ ಆಚರಣೆಗೆ ಆಹ್ವಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.