ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಮಕ್ಕಳಾದ ತೈಮುರ್ ಹಾಗೂ ಜೇ ಗಾಗಿ ಪ್ರಧಾನಿ ಮೋದಿ ಅವರ ಹಸ್ತಾಕ್ಷರ ಪಡೆದ ಫೋಟೊವನ್ನು ಕರೀನಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
ಇನ್‌ಸ್ಟಾಗ್ರಾಂ ಚಿತ್ರ
ಹಿಂದಿನ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗ ಹಾಗೂ ಸಾಹಸಗಳ ಮೂಲಕ ಬಾಲಿವುಡ್‌ನ ದಂತಕಥೆ ರಾಜ್ ಕಪೂರ್ ಅವರ ಜನ್ಮಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಚಿತ್ರರಂಗ ಡಿ. 13ರಿಂದ 15ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಪೂರ್ ಕುಟುಂಬದ ಸದಸ್ಯರು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.
ಕಪೂರ್ ಕುಟುಂಬದ ಈ ಭೇಟಿಯ ಸಂದರ್ಭದಲ್ಲಿ ಸೈಫ್ ಅಲಿ ಖಾನ್, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್, ಕರೀಷ್ಮಾ ಕಪೂರ್ ಪ್ರಮುಖವಾಗಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪೂರ್ ಕುಟುಂಬದವರು ವಿಶೇಷ ಉಡುಗೊರೆ ನೀಡಿದರು
ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಮಕ್ಕಳಾದ ತೈಮುರ್ ಹಾಗೂ ಜೇ ಗಾಗಿ ಪ್ರಧಾನಿ ಮೋದಿ ಅವರ ಹಸ್ತಾಕ್ಷರ ಪಡೆದ ಫೋಟೊವನ್ನು ಕರೀನಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಅಜ್ಜನ ಅಸಾಧಾರಣ ಜೀವನ ಮತ್ತು ಪಯಣವನ್ನು ನೆನೆಯುವ ಹಾಗೂ ಅದನ್ನು ಸಂಭ್ರಮಿಸುವ ಕ್ಷಣದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತಿರುವುದು ಸಂತಸದ ಕ್ಷಣ ಎಂದು ಕರೀನಾ ಹೇಳಿದ್ದಾರೆ. ದಾದಾಜಿ ಅವರ ಕಲಾತ್ಮಕತೆ, ದೂರದೃಷ್ಟಿ ಮತ್ತು ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ನೂರು ವರ್ಷಗಳ ಕಾಲ ಸಂಭ್ರಮಿಸಿದ್ದೇವೆ. ಮುಂದಿನ ಪೀಳಿಗೆಗೂ ಅವರ ಸಾಧನೆ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.
ಕಪೂರ್ ಕುಟುಂಬದ ಈ ಭೇಟಿಯ ಸಂದರ್ಭದಲ್ಲಿ ಸೈಫ್ ಅಲಿ ಖಾನ್, ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್, ಕರೀಷ್ಮಾ ಕಪೂರ್ ಪ್ರಮುಖವಾಗಿದ್ದರು. ‘ರಾಜ್ ಕಪೂರ್ 100’ ಸಿನಿಮೋತ್ಸವವು ಡಿ. 13ರಿಂದ 15ರವರೆಗೆ 40 ನಗರಗಳ 135 ಚಿತ್ರಮಂದಿರಗಳಲ್ಲಿ ನಡೆಯಲಿದ್ದು ಪ್ರಮುಖ 10 ಸಿನಿಮಾಗಳು ಪ್ರದರ್ಶನಳ್ಳಲಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.