ADVERTISEMENT

ಬಾಲಿವುಡ್‌ ನಟ ಕಪಿಲ್ ಶರ್ಮಾ, ರಾಜ್‌ಪಾಲ್‌ ಯಾದವ್‌ಗೆ ಜೀವ ಬೆದರಿಕೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2025, 4:49 IST
Last Updated 23 ಜನವರಿ 2025, 4:49 IST
   

ಮುಂಬೈ: ಬಾಲಿವುಡ್‌ ನಟ ಕಪಿಲ್‌ ಶರ್ಮಾ, ರಾಜ್‌ಪಾಲ್‌ ಯಾದವ್ ಅವರಿಗೆ ಜೀವ ಬೆದರಿಕೆ ಇ-ಮೇಲ್‌ ಬಂದಿರುವುದಾಗಿ ವರದಿಯಾಗಿದೆ. 

‘ವಿಷ್ಣು ಹೆಸರಿನ ವ್ಯಕ್ತಿಯಿಂದ ಇ –ಮೇಲ್‌ ಸಂದೇಶವಿದೆ. ರಾಜ್‌ಪಾಲ್, ಕಪಿಲ್‌ ಶರ್ಮಾ ಮತ್ತು ಆತನ ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಮೇಲ್‌ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ’ ಎಂದು ಪೊಲೀಸರ ತಿಳಿಸಿರುವುದಾಗಿ ವರದಿಯಾಗಿದೆ.

2024ರ ಡಿ.14ರಂದು ಇ ಮೇಲ್‌ ಸಂದೇಶ ಬಂದಿದ್ದು, ಸ್ಥಳೀಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇ–ಮೇಲ್‌ ಪಾಕಿಸ್ತಾನದಿಂದ ಬಂದಿದೆ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.