ಶೈನ್ ಶೆಟ್ಟಿ ಹಾಗೂ ರಾಜು ತಾಳಿಕೋಟೆ
ಚಿತ್ರ: ಇನ್‌ಸ್ಟಾಗ್ರಾಮ್
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (62) ಅವರು ಅ.13ರಂದು ತೀವ್ರ ಹೃದಯಾಘಾತದಿಂದ ನಿಧನರಾದರು. ರಾಜು ತಾಳಿಕೋಟೆ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ನಟ ಶೈನ್ ಶೆಟ್ಟಿ ರಾಜು ತಾಳಿಕೋಟೆ ಅವರ ಅಗಲಿಕೆಗೆ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನಟ ಶೈನ್ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮದಲ್ಲಿ ರಾಜು ತಾಳಿಕೋಟೆ ಅವರ ಫೋಟೊವನ್ನು ಹಂಚಿಕೊಂಡು ಭಾವುಕರಾಗಿ ಬರೆದುಕೊಂಡಿದ್ದಾರೆ. ‘ಯಾವುದೋ ಜನ್ಮದಲ್ಲಿ ನನ್ನ ಮಗನಾಗಿದ್ರೇನೋ ರಾಜು ಸರ್, ಪುಟ್ಟ ಮಗುವಿನಂತೆ ಹಠ ಅದೇ ಪುಟ್ಟ ಮಗುವಿನ ಮುಗ್ಧತೆ ಎರಡನ್ನೂ ಈ ಮೂರು ದಿನದಲ್ಲಿ ನೋಡಿದೆ. ಮತ್ತೆ ಹುಟ್ಟಿಬನ್ನಿ ಕನ್ನಡ ಕಲಾಭಿಮಾನಿಗಳ ಸೇವೆ ಮಾಡುವ ಅವಕಾಶ ಮತ್ತೆ ನಿಮಗೆ ಸಿಗಲಿ, ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ರಾಜೇಸಾಬ್ ಮಕ್ಕುಮ್‌ಸಾಬ್ ಯೆಂಕಂಚಿ’ ಎಂದು ಬರೆದುಕೊಂಡಿದ್ದಾರೆ.
ಇನ್ನು, ಶೈನ್ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರಾಜು ತಾಳಿಕೋಟೆ ಅವರು ಅಭಿನಯಿಸುತ್ತಿದ್ದರು. ಸಿನಿಮಾ ಚಿತ್ರೀಕರಣದಲ್ಲಿ ರಾಜು ತಾಳಿಕೋಟೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆ ಕೂಡಲೇ ರಾಜು ತಾಳಿಕೋಟೆ ಅವರನ್ನು ಶೈನ್ ಶೆಟ್ಟಿ ಸೇರಿದಂತೆ ಇನ್ನಿತರರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ರಾಜು ತಾಳಿಕೋಟಿ ಅವರು ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.