ADVERTISEMENT

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 3:05 IST
Last Updated 11 ಜನವರಿ 2026, 3:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರ ಕೃಪೆ: Gemini AI

ಬೆಂಗಳೂರು: ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ರಾಮಮೂರ್ತಿ ಎಂ.ಜಿ ಆಯ್ಕೆಯಾಗಿದ್ದಾರೆ. ಶನಿವಾರ ಶಿವಾನಂದ ಸರ್ಕಲ್‌ ಬಳಿಯ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವರು ಹಿಂದಿನ ಅಧ್ಯಕ್ಷ ಉಮೇಶ್‌ ಬಣಕಾರ್‌ ಅವರನ್ನು ಮಣಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.

ADVERTISEMENT

ಉಪಾಧ್ಯಕ್ಷರಾಗಿ ನಂದಿಹಾಳ್‌ ಎಸ್‌.ಜೆ.ಆಯ್ಕೆಗೊಂಡಿದ್ದಾರೆ. ರಾಜೇಶ್‌ ಬ್ರಹ್ಮಾವರ್‌, ಶಿಲ್ಪ ಶ್ರೀನಿವಾಸ್‌, ಹಿರಿಯ ನಟ, ನಿರ್ಮಾಪಕ ಗಣೇಶ್‌ ರಾವ್‌ ಕೇಸರ್‌ಕರ್‌ ಮುಂತಾದವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.