ADVERTISEMENT

ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 7:26 IST
Last Updated 27 ಫೆಬ್ರುವರಿ 2026, 7:26 IST
<div class="paragraphs"><p>ರಶ್ಮಿಕಾ-ವಿಜಯ್ ದೇವರಕೊಂಡ</p></div>

ರಶ್ಮಿಕಾ-ವಿಜಯ್ ದೇವರಕೊಂಡ

   

ಚಿತ್ರ: ಇನ್‌ಸ್ಟಾಗ್ರಾಂ

ನಟಿ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅವರು ನಿನ್ನೆ (ಫೆ.26) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್​​ನಲ್ಲಿ ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ರಶ್ಮಿಕಾ ಹಾಗೂ ವಿಜಯ್ ಹಸೆಮಣೆ ಏರಿದ್ದಾರೆ.

ADVERTISEMENT

ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟುವ ಮೂಲಕ ವರಿಸಿದ್ದಾರೆ. ಎರಡು ದಿನಗಳ ಹಿಂದೆ ತೆಲಂಗಾಣದಿಂದ ಪುರೋಹಿತರ ತಂಡವೊಂದು ಇವರ ಮದುವೆಗೆಂದು ಉದಯಪುರಕ್ಕೆ ಬಂದಿತ್ತು. ನಿನ್ನೆ ಬೆಳಿಗ್ಗೆ 10:10ಕ್ಕೆ ಪುರೋಹಿತರು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.

ರಶ್ಮಿಕಾ-ವಿಜಯ್ ದೇವರಕೊಂಡ

ಅದೇ ದಿನ ಸಂಜೆ ವೇಳೆಗೆ ರಶ್ಮಿಕಾ ಮಂದಣ್ಣ ಅವರ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿದೆ. ಮದುವೆಯ ಫೋಟೊಗಳನ್ನು ಇಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೊಗಳನ್ನು ನೋಡಿದ ಅಭಿಮಾನಿಗಳು ನವಜೋಡಿಗೆ ಶುಭ ಕೋರಿದ್ದಾರೆ.

ಈ ನಡುವೆ ತಾರಾ ಜೋಡಿಯ ವಿವಾಹ ಮಹೋತ್ಸವದಲ್ಲಿ ಯಾವುದೇ ಆಧುನಿಕ ಸ್ಪರ್ಷ ಇಲ್ಲದಿರುವುದು ವಿಶೇವಾಗಿತ್ತು. ಜೋಡಿಯು ರಾಮ–ಸೀತೆಯ ಜೋಡಿಯಂತೆ ವಸ್ತ್ರಧರಿಸಿ ಗಮನಸೆಳೆದಿದ್ದಾರೆ.

ರಶ್ಮಿಕಾ-ವಿಜಯ್ ದೇವರಕೊಂಡ

ರಶ್ಮಿಕಾ ಅವರು ಕೆಂಪು ಬಣ್ಣದ ಸೀರೆ ಮತ್ತು ಚಿನ್ನದ ಬಣ್ಣದ ಬ್ಲೌಸ್ ಹಾಗೂ ಬೀಜ್ ಬಣ್ಣದ ವೇಲ್‌ನೊಂದಿಗೆ ಆಕರ್ಷಕವಾಗಿ ಕಂಗೊಳಿಸಿದ್ದಾರೆ.

ಇನ್ನೂ, ರಶ್ಮಿಕಾ ಅವರು ಧರಿಸಿದ್ದ ಪ್ರಾಚೀನ ಶೈಲಿಯ ಆಭರಣಗಳು ಅವರ ಲುಕ್‌ ಅನ್ನು ಇಮ್ಮಡಿಕೊಳಿಸಿದ್ದವು.

ಇತ್ತ, ವಿಜಯ್ ದೇವರಕೊಂಡ ಮದುವೆ ವಸ್ತ್ರದಲ್ಲಿ ರಾಜಮನೆತನದ ಯುವರಾಜನಂತೆ ಕಂಗೊಳಿಸಿದ್ದಾರೆ. ಹಣೆಗೆ ತಿಲಕ, ಅಂಗವಸ್ತ್ರ, ಉದ್ದನೆಯ ಧೋತಿ ಧರಿಸಿದ್ದರು. ಇದು ಶಕ್ತಿ, ವಂಶಾವಳಿ ಮತ್ತು ಪವಿತ್ರ ವಾಸ್ತುಶಿಲ್ಪದ ಸಂಕೇತವಾಗಿ ಕಸೂತಿ ಮಾಡಲಾಗಿತ್ತು.

ರಶ್ಮಿಕಾ-ವಿಜಯ್ ದೇವರಕೊಂಡ

ಈ ಜೋಡಿ ಗೀತಾ ಗೋವಿಂದಂ (2018) ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾಗುತ್ತಾರೆ. ಬಳಿಕ ಸುಮಾರು 8 ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರೂ ಕೂಡ, ಮದುವೆಗೆ ನಾಲ್ಕು ದಿನಗಳು ಬಾಕಿ ಇರುವವರೆಗೂ ಗೌಪ್ಯತೆ ಕಾಪಾಡಿಕೊಂಡಿದ್ದರು.

ರಶ್ಮಿಕಾ ಮತ್ತು ವಿಜಯ್ ಅವರು ಮಾರ್ಚ್ 4ರಂದು ಹೈದರಾಬಾದ್​​ನ ತಾಜ್ ಕೃಷ್ಣದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರುಗಳು ಭಾಗಿಯಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.