ADVERTISEMENT

‘ಗುಡ್ ಬೈ‘: ಕನ್ನಡತಿ ರಶ್ಮಿಕಾ ಮಂದಣ್ಣಗೆ ಅಮಿತಾಭ್‌ ಸಾಥ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2022, 8:59 IST
Last Updated 3 ಸೆಪ್ಟೆಂಬರ್ 2022, 8:59 IST
ಪೋಸ್ಟರ್‌
ಪೋಸ್ಟರ್‌   

ಬಾಲಿವುಡ್‌ಗೆ ಪ್ರವೇಶ ಮಾಡಿರುವ ಕನ್ನಡದ ನಟಿರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ‘ಗುಡ್ ಬೈ‘ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಹಿಂದಿಯ ಖ್ಯಾತ ನಟ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ಪೋಸ್ಟರ್‌ನಲ್ಲಿ ಅಮಿತಾಭ್‌ ನೀಲಿ ಬಣ್ಣದ ಜಾಕೆಟ್‌ ಧರಿಸಿದ್ದಾರೆ. ಲೇಯರ್ ಮಾಡಿದ ಬೀಜ್ ಕುರ್ತಾ ಧರಿಸಿರುವುದನ್ನು ಕಾಣಬಹುದು. ಅವರ ಹಿಂದೆ ಹಸಿರು ಬಣ್ಣದ ಕುರ್ತಾ ಮತ್ತು ದುಪಟ್ಟಾ ಧರಿಸಿರುವ ರಶ್ಮಿಕಾ ಮಂದಣ್ಣ ಇದ್ದಾರೆ. ನಟಿ ಗಾಳಿಪಟ ಹಾರಿಸುವ ನೂಲಿನ ಬಂಡಲ್ ಹಿಡಿದಿದ್ದಾರೆ. ಈ ಪೋಸ್ಟರ್‌ಗೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ಗುಡ್ ಬೈ ಸಿನಿಮಾದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದೆ. ಈ ಹಿಂದೆ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಸಾಕುಪ್ರಾಣಿಗಳ ಜೊತೆ ಇರುವ ಫೋಟೊಗಳು ಕುಡ ವೈರಲ್‌ ಆಗಿದ್ದವು.

ಚಿತ್ರದಲ್ಲಿ ಅಮಿತಾಭ್ ಮತ್ತು ರಶ್ಮಿಕಾ ಜೊತೆಗೆ ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಕೂಡ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.