ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ
ರಶ್ಮಿಕಾ ಮಂದಣ್ಣ ಮತ್ತು ನಟ ದೀಕ್ಷಿತ್ ಶೆಟ್ಟಿ ಜತೆಯಾಗಿ ನಟಿಸಿರುವ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ‘ಸ್ವರವೇ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ತೆಲುಗು ಚಿತ್ರವಿದು. ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿಯೂ ಚಿತ್ರ ತೆರೆಗೆ ಬರಲಿದೆ. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಿಸುತ್ತಿದ್ದು, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.
ರಶ್ಮಿಕಾ ಸದ್ಯ ತೆಲುಗು, ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ. ‘ಛಾವಾ’ ಮತ್ತು ‘ಕುಬೇರ’ ಚಿತ್ರಗಳ ಯಶಸ್ಸಿನ ನಂತರ ಅವರು ಕನ್ನಡದ ನಟನೊಬ್ಬನ ಜತೆ ತೆರೆ ಹಂಚಿಕೊಂಡಿರುವುದು ವಿಶೇಷವಾಗಿದೆ. ‘ದಸರಾ’ ಚಿತ್ರದ ಮೂಲಕ ತೆಲುಗಿನಲ್ಲಿ ಜನಪ್ರಿಯತೆ ಗಳಿಸಿರುವ ದೀಕ್ಷಿತ್ ಕೂಡ ಕನ್ನಡದ ಜತೆಗೆ ತೆಲುಗಿನಲ್ಲಿಯೂ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಹೇಶಮ್ ಅಬ್ದುಲ್ ವಹಾಬ್ ಈ ಹಾಡಿಗೆ ಸಂಗೀತ ಸಂಯೋಜಿಸಿರುವುದರ ಜತೆಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಈ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯವಿದೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಬಾಂಧವ್ಯದ ದೃಶ್ಯಗಳಿಂದಲೇ ಕೂಡಿರುವ ಈ ಹಾಡು ಅವರಿಬ್ಬರ ಪ್ರೇಮ ಪಯಣದ ಕಥೆ ಹೇಳುತ್ತಿದೆ.
ಕೃಷ್ಣನ್ ವಸಂತ್ ಛಾಯಾಚಿತ್ರಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.