ADVERTISEMENT

ಪ್ರೀತ್ಸೋದ್ ತಪ್ಪಾ..?ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್-ಶಿಲ್ಪಾ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2025, 6:13 IST
Last Updated 13 ಜುಲೈ 2025, 6:13 IST
<div class="paragraphs"><p>ರವಿಚಂದ್ರನ್‌–ಶಿಲ್ಪಾ ಶೆಟ್ಟಿ</p></div>

ರವಿಚಂದ್ರನ್‌–ಶಿಲ್ಪಾ ಶೆಟ್ಟಿ

   

ಬೆಂಗಳೂರು: ಧ್ರುವ ಸರ್ಜಾ ಅಭಿನಯಿಸಿ, ‘ಜೋಗಿ’ ಪ್ರೇಮ್‌ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಕೆಡಿ’ ಚಿತ್ರದ ಟೀಸರ್‌ ಬಿಡುಗಡೆಯ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್‌ ಮತ್ತು ನಟಿ ಶಿಲ್ಪಾ ಶೆಟ್ಟಿ ವೇದಿಕೆ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. 

‘ಪ್ರೀತ್ಸೋದ್‌ ತಪ್ಪಾ?’, ‘ಒಂದಾಗೋಣ ಬಾ’ ಚಿತ್ರಗಳಂತಹ ಹಿಟ್‌ ಸಿನಿಮಾ ನೀಡಿದ್ದ ಈ ಜೋಡಿ ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡಿದ್ದರು. 

ADVERTISEMENT

ಪ್ರೀತ್ಸೋದ್‌ ತಪ್ಪಾ ಚಿತ್ರದ ‘ಬಂಗಾರದಿಂದ ಬಣ್ಣಾನಾ ತಂದ...’ ಸೂಪರ್‌ ಹಿಟ್ ಹಾಡಿಗೆ ರವಿಚಂದ್ರನ್‌ ಮತ್ತು ಶಿಲ್ಪಾ ಶೆಟ್ಟಿ ಹೆಜ್ಜೆ ಹಾಕಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಕೆಡಿ ಚಿತ್ರದಲ್ಲಿ ತಾರಾಗಣವೇ ಇದೆ. ಢಾಕ್‌ ದೇವನಾಗಿ ಸಂಜಯ್‌ ದತ್‌ ನಟಿಸಿದ್ದರೆ, ರವಿಚಂದ್ರನ್‌ ಅಣ್ಣಯ್ಯಪ್ಪನಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್‌ ಅರವಿಂದ್‌ ಧರ್ಮನ ಪಾತ್ರದಲ್ಲಿದ್ದಾರೆ. ಮಹಾಲಕ್ಷ್ಮಿಯಾಗಿ ನಾಯಕಿ ರೀಷ್ಮಾ ನಾಣಯ್ಯ ನಟಿಸಿದ್ದು, ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಇದ್ದಾರೆ.

1980ರ ದಶಕದಲ್ಲಿನ ಬೆಂಗಳೂರಿನ ರೌಡಿಸಂ ಕಥೆಯನ್ನು ಚಿತ್ರ ಹೊಂದಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದ್ದು, ವಿಲಿಯಂ ಡೇವಿಡ್‌ ಛಾಯಾಚಿತ್ರ, ಸಂಕೇತ್‌ ಆಚಾರ್‌ ಸಂಕಲನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.