ADVERTISEMENT

ರವಿಚಂದ್ರನ್‌ ಪುತ್ರನ ಕಲ್ಯಾಣ: ಸಂಗೀತಾ ಜೊತೆ ಸಪ್ತಪದಿ ತುಳಿದ ಮನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2022, 7:50 IST
Last Updated 21 ಆಗಸ್ಟ್ 2022, 7:50 IST
ಸಂಗೀತಾ, ಮನು
ಸಂಗೀತಾ, ಮನು   

ಚಂದನವನದ ನಟರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್‌ (ಮನು) ಸಂಗೀತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಭಾನುವಾರ ಬೆಳಗ್ಗೆ8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾರನ್ನು ವರಿಸಿದ್ದಾರೆ. ಸಂಗೀತಾ ಅವರು ರವೀಚಂದ್ರನ್‌ ಕುಟುಂಬದ ದೂರದ ಸಂಬಂಧಿಯಾಗಿದ್ದಾರೆ.ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನತ್ರಿಪುರವಾಸಿನಿಯಲ್ಲಿ ಮದುವೆ ನಡೆಯಿತು.

ಈ ಶುಭ ಘಳಿಗೆಯಲ್ಲಿ ಚಿತ್ರರಂಗದ ಗಣ್ಯರು ಸೇರಿದಂತೆ ಎರಡು ಕುಟುಂಬದವರು, ಸಂಬಂಧಿಕರು, ಆಪ್ತರು ಹಾಗೂ ಗೆಳೆಯರು ಭಾಗವಹಿಸಿದ್ದರು.

ADVERTISEMENT

ಚಂದನವದ ತಾರೆಗಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್,ಶರಣ್, ನಟಿ ಖುಷ್ಬೂ, ಉಮಾಶ್ರೀ, ಹಂಸಲೇಖಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇಂದು ಸಂಜೆಆರತಕ್ಷತೆ ನಡೆಯಲಿದ್ದು, ಚಿತ್ರರಂಗದ ಗಣ್ಯರು, ಕೆಲ ರಾಜಕಾರಣಿಗಳು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.