ADVERTISEMENT

2021ಕ್ಕೆ ಸಿನಿರಂಗಕ್ಕೆ ಮರಳಲಿದ್ದಾರೆ ರಿಯಾ ಚಕ್ರವರ್ತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 14:02 IST
Last Updated 31 ಡಿಸೆಂಬರ್ 2020, 14:02 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ನಟಿ ರಿಯಾ ಚಕ್ರವರ್ತಿ 2021ಕ್ಕೆ ಬಾಲಿವುಡ್ ಸಿನಿರಂಗಕ್ಕೆ ಮರಳಲಿದ್ದಾರೆ ಎಂಬ ವಿಷಯವನ್ನು ದೃಢಪಡಿಸಿದ್ದಾರೆ ಬರಹಗಾರ, ನಿರ್ದೇಶಕ ರುಮಿ ಜಾಫ್ರಿ.

‘ರಿಯಾ 2021ರ ಆರಂಭದಲ್ಲಿ ಸಿನಿಮಾರಂಗಕ್ಕೆ ಮರಳಲಿದ್ದು ಪುನಃ ನಟನೆ ಆರಂಭಿಸಲಿದ್ದಾರೆ’ ಎಂದಿದ್ದಾರೆ ಜಾಫ್ರಿ.

‘ನಾನು ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದೆ. ಅವರು ಶಾಂತವಾಗಿದ್ದರು, ಹೆಚ್ಚಿಗೆ ಮಾತನಾಡಲಿಲ್ಲ. ಹಿಂದೆ ಆಗಿದ್ದ ಘಟನೆಗಳಿಗೆ ರಿಯಾರನ್ನು ದೂರುವ ಹಾಗಿಲ್ಲ. ಈ ಪ್ರಕರಣ ಒಂದು ಹಂತಕ್ಕೆ ಬರಲಿ, ಖಂಡಿತ ರಿಯಾಗೆ ಬಹಳಷ್ಟು ಮಾತನಾಡಲು ಇದೆ’ ಎಂದಿದ್ದಾರೆ ಅವರು.

ADVERTISEMENT

ರಿಯಾ ಚಕ್ರವರ್ತಿ ಪ್ರಿಯಕರ, ನಟ ಸುಶಾಂತ್ ಸಿಂಗ್ ರಜಪೂತ್‌ 2020ರ ಜೂನ್‌ 14ರಂದು ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೆಪ್ಟೆಂಬರ್ 8ಕ್ಕೆ ಎನ್‌ಸಿಬಿ ರಿಯಾ ಅವರನ್ನು ಕಸ್ಟಡಿಗೆ ಪಡೆದಿತ್ತು. ಪ್ರಕರಣಕ್ಕೆ ಬಂಧಿಸಿ ಈಕೆಯನ್ನು ಬಂಧಿಸಲಾಗಿತ್ತು. ನಂತರ ಬೇಲ್‌ನಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.