ADVERTISEMENT

‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 9:16 IST
Last Updated 22 ನವೆಂಬರ್ 2025, 9:16 IST
<div class="paragraphs"><p>ಸತೀಶ್‌ ನೀನಾಸಂ</p></div>

ಸತೀಶ್‌ ನೀನಾಸಂ

   

ಚಿತ್ರ: ಇನ್‌ಸ್ಟಾಗ್ರಾಮ್

ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ನಟ ಸತೀಶ್‌ ನೀನಾಸಂ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ನಿರ್ದೇಶಕ ವಿನೋದ್‌ ದೋಂಡಾಳೆ ಅಕಾಲಿಕ ನಿಧನದಿಂದ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾ ಅರ್ಧಕ್ಕೆ ನಿಂತಿತ್ತು. ಇದಾದ ಬಳಿಕ ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಸಿನಿಮಾ ಮತ್ತೆ ಸೆಟ್ಟೇರಿತ್ತು. ಇದೀಗ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಈ ಕುರಿತು ಸಮಾಜಿಕ ಮಾಧ್ಯಮದಲ್ಲಿ ನಟ ಸತೀಶ್‌ ನೀನಾಸಂ ಅವರು, ‘ನಮ್ಮ ಚಿತ್ರದ ಮೊದಲ ಹಾಡು ಮಾದಪ್ಪನ ಗೀತೆ ನವೆಂಬರ್ 25ರಂದು ಸಂಜೆ 5:40ಕ್ಕೆ ಬಿಡುಗಡೆಯಾಗುತ್ತಿದೆ. ಇಲ್ಲಿಂದ ಹೊಸ ಯುಗ ಪ್ರಾರಂಭವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ. ಇನ್ನು, ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ನಟ ನೀನಾಸಂ ಸತೀಶ್ ಅವರಿಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.

ನಿರ್ದೇಶಕ ವಿನೋದ್‌ ದೋಂಡಾಳೆ ಈ ಚಿತ್ರ ಪ್ರಾರಂಭಿಸಿದ್ದರು. ಅವರ ಅಕಾಲಿಕ ಮರಣದಿಂದ ಮನು ಶೆಡ್ಗಾರ್‌ ನಿರ್ದೇಶಕನಾಗಿ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ನೀನಾಸಂ ಸತೀಶ್ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.