ADVERTISEMENT

‘ಹನುಮಾನ್‌’ ಸಿನಿಮಾ ಘೋಷಣೆ ಬೆನ್ನಲ್ಲೇ ‘ಛತ್ರಪತಿ ಶಿವಾಜಿ’ಯಾದ ರಿಷಬ್‌ ಶೆಟ್ಟಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2024, 6:26 IST
Last Updated 3 ಡಿಸೆಂಬರ್ 2024, 6:26 IST
<div class="paragraphs"><p>‘ದಿ ಪ್ರೈಡ್‌ ಆಫ್‌ ಭಾರತ್‌ ಛತ್ರಪತಿ ಶಿವಾಜಿ ಮಹಾರಾಜ್‌’ ಸಿನಿಮಾದ ಪೋಸ್ಟರ್</p></div>

‘ದಿ ಪ್ರೈಡ್‌ ಆಫ್‌ ಭಾರತ್‌ ಛತ್ರಪತಿ ಶಿವಾಜಿ ಮಹಾರಾಜ್‌’ ಸಿನಿಮಾದ ಪೋಸ್ಟರ್

   

ಬೆಂಗಳೂರು: ತೆಲುಗಿನಲ್ಲಿ ‘ಹನುಮಾನ್‌’ ಸಿನಿಮಾ ಘೋಷಣೆ ಬೆನ್ನಲ್ಲೇ ನಟ ರಿಷಬ್‌ ಶೆಟ್ಟಿ ಅವರ ‘ದಿ ಪ್ರೈಡ್‌ ಆಫ್‌ ಭಾರತ್‌ ಛತ್ರಪತಿ ಶಿವಾಜಿ ಮಹಾರಾಜ್‌’ ಸಿನಿಮಾ ಘೋಷಣೆಯಾಗಿದೆ.

ಈ ಚಿತ್ರ ಸಂದೀಪ್‌ ಸಿಂಗ್‌ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. 2027ರ ಜನವರಿ 21ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ADVERTISEMENT

ಸಂದೀಪ್‌ ಸಿಂಗ್‌ ಅವರು 2024ರ ಫೆಬ್ರುವರಿ 16ರಂದು ಈ ಸಿನಿಮಾವನ್ನು ಘೋಷಿಸಿದ್ದರು. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ರಣ್‌ದೀಪ್‌ ಹೂಡ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿದ್ದ ‘ಸ್ವಾತಂತ್ರ್ಯ ವೀರ್‌ ಸಾವರ್ಕರ್‌’ ನಿರ್ಮಾಪಕರಲ್ಲಿ ಸಂದೀಪ್‌ ಸಿಂಗ್‌ ಒಬ್ಬರಾಗಿದ್ದರು. ಶಿವಾಜಿ ಮಹಾರಾಜ್‌ ಪತ್ನಿಯ ಪಾತ್ರದಲ್ಲಿ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರ ಮೊಮ್ಮಗಳಾದ ಝಾನೈ ಭೋಂಸ್ಲೆ ನಟಿಸಲಿದ್ದಾರೆ.

ಸದ್ಯ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್‌ ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.