ADVERTISEMENT

ಜ.24ಕ್ಕೆ ದಿನಕರ್ ತೂಗುದೀ‍ಪ ನಿರ್ದೇಶನದ ‘ರಾಯಲ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 15:56 IST
Last Updated 30 ಡಿಸೆಂಬರ್ 2024, 15:56 IST
ಸಂಜನಾ, ವಿರಾಟ್‌ 
ಸಂಜನಾ, ವಿರಾಟ್‌    

ಜಯಣ್ಣ ಕಂಬೈನ್ಸ್ ಬ್ಯಾನರ್‌ನಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿರುವ, ದಿನಕರ್‌ ತೂಗುದೀಪ ನಿರ್ದೇಶನದ ‘ರಾಯಲ್’ ಸಿನಿಮಾ ಜ.24ರಂದು ಬಿಡುಗಡೆಯಾಗಲಿದೆ. 

‘ಕಿಸ್‌’ ಚಿತ್ರದ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ನಟ ವಿರಾಟ್‌ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ‘ಸಲಗ’ ಖ್ಯಾತಿಯ ಸಂಜನಾ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಜನವರಿ ಎರಡನೇ ವಾರದಲ್ಲಿ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದಿದೆ ಚಿತ್ರತಂಡ. 

‘ರಾಯಲ್’ ಕುರಿತು ಮಾತನಾಡಿದ ದಿನಕರ್ ತೂಗುದೀಪ, ‘ಚಿತ್ರ ಚೆನ್ನಾಗಿ ಮೂಡಿಬರುವುದಕ್ಕೆ ಕಥೆಗಾರ ರಘು ನಿಡುವಳ್ಳಿ ಕಾರಣ. ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ವಿರಾಟ್‍ ಎರಡನೇ ಸಿನಿಮಾಗೇ ಇಷ್ಟೊಂದು ಖರ್ಚು ಮಾಡಬೇಕಿತ್ತಾ ಎಂದೆನಿಸಬಹುದು. ಆದರೆ ಚಿತ್ರದಿಂದ ದುಡ್ಡು ಮಾಡಬೇಕು ಎನ್ನುವುದಕ್ಕಿಂತ, ಚಿತ್ರರಂಗಕ್ಕೊಬ್ಬ ಒಳ್ಳೆಯ ಹೀರೊ ಕೊಡಬೇಕು ಎನ್ನುವ ದೃಷ್ಟಿಯಿಂದ ನಿರ್ಮಾಪಕರು ಹಣ ಹಾಕಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಗೋವಾ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ’ ಎಂದರು. ರಘು ಮುಖರ್ಜಿ, ಛಾಯಾ ಸಿಂಗ್‍, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್‍ ಶೆಟ್ಟಿ, ರವಿ ಭಟ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸಂಕೇತ್ ಛಾಯಾಚಿತ್ರಗ್ರಹಣ, ಚರಣ್‍ ರಾಜ್‍ ಸಂಗೀತ, ಕೆ.ಎಂ. ಪ್ರಕಾಶ್‍ ಸಂಕಲನ, ಮೋಹನ್‍ ಬಿ. ಕೆರೆ ಕಲಾ ನಿರ್ದೇಶನ, ರವಿ ವರ್ಮ ಸಾಹಸ ನಿರ್ದೇಶನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.