
ನಟಿ ಸಮಂತಾ
ಚಿತ್ರ: ಎಕ್ಸ್ ಖಾತೆ
ಇತ್ತೀಚಿಗೆ ನಟ ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಟಿ ನಿಧಿ ಅಗರವಾಲ್ ಜೊತೆಗೆ ಅಭಿಮಾನಿಗಳು ಮೈಮೇಲೆ ಬಿದ್ದು ಕೆಟ್ಟದಾಗಿ ನಡೆಸಿಕೊಂಡಿದ್ದರು. ಈ ಬೆನ್ನಲ್ಲೇ ಇದೀಗ ನಟಿ ಸಮಂತಾ ರುತ್ ಪ್ರಭು ಅವರಿಗೂ ಕೂಡ ಅದೇ ರೀತಿಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಭಾನುವಾರ ಸಂಜೆ ನಟಿ ಸಮಂತಾ ರುತ್ ಪ್ರಭು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ನಟಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಇದೇ ವೇಳೆ ಸಮಂತ ಕಾರ್ಯಕ್ರಮ ಒಂದನ್ನು ಮುಗಿಸಿ ಕಾರಿನ ಬಳಿ ಹೋಗುತ್ತಿದ್ದಾಗ ಏಕಾಏಕಿ ಜನ ಅವರ ಮೇಲೆ ಮುಗಿಬಿದ್ದಿದ್ದಾರೆ.
ಆ ಕೂಡಲೇ ಸಮಂತಾ ಅವರ ಭದ್ರತಾ ಸಿಬ್ಬಂದಿ ಅವರನ್ನು ಕಾರಿನ ಬಳಿ ಕರೆದುಕೊಂಡು ಹೋಗಿದ್ದಾರೆ. ಇದೇ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದೇ ವಿಡಿಯೊ ನೋಡಿದ ಸಮಂತಾ ಅಭಿಮಾನಿಗಳು ಜನರ ವರ್ತನೆಗೆ ಗರಂ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.