ADVERTISEMENT

21 Hours | ಹೊಸ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ ನಟ ಡಾಲಿ ಧನಂಜಯ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 12:11 IST
Last Updated 22 ಆಗಸ್ಟ್ 2021, 12:11 IST
ನಟ ಡಾಲಿ ಧನಂಜಯ್
ನಟ ಡಾಲಿ ಧನಂಜಯ್   

ಬೆಂಗಳೂರು: ನಟ ಡಾಲಿ ಧನಂಜಯ್ ಅವರು ತಮ್ಮ ಹೊಸ ಸಿನಿಮಾದ ಪೋಸ್ಟರ್‌ ಅನ್ನು ಟ್ವಿಟರ್‌ನಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ.

ಧನಂಜಯ್‌, ನಾಯಕ ನಟ ಹಾಗೂ ಖಳ ನಾಯಕನಾಗಿ ಕನ್ನಡ, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ನಾಳೆ (ಆಗಸ್ಟ್‌ 23) ಧನಂಜಯ್‌ ಅವರು ಹುಟ್ಟುಹಬ್ಬ. ಹಾಗಾಗಿ ಹೊಸ ಚಿತ್ರಗಳು ಕುರಿತು ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

ಧನಂಜಯ್‌, ‘21 ಅವರ್ಸ್‌’ ಚಿತ್ರದ ಮೂಲಕ ಮಾಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರ ಕನ್ನಡದಲ್ಲೂ ತೆರೆ ಕಾಣಲಿದೆ. ಈ ಚಿತ್ರ ಜೈಶಂಕರ್ ಪಂಡಿತ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಸದ್ಯ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಚಿತ್ರಕ್ಕೆ ‘21 ಅವರ್ಸ್’(21 Hours) ಎಂದು ಹೆಸರಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.