ADVERTISEMENT

ಶಂಕರ್ ರಾಮನ್ ನಿರ್ದೇಶನದ ‘ವಾಮನ’ನಿಗೆ ತುಳುನಾಡ ಬೆಡಗಿ ಜೋಡಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 11:01 IST
Last Updated 29 ಏಪ್ರಿಲ್ 2022, 11:01 IST
ರಚನಾ ರೈ, ಧ್ವನೀರ್
ರಚನಾ ರೈ, ಧ್ವನೀರ್   

‘ಬಜಾರ್‌’ ಸಿನಿಮಾ ಮೂಲಕ ನಾಯಕನಾಗಿ ಮಿಂಚಿದ್ದ ನಟ ಧ್ವನೀರ್,‌ ‘ಬೈ ಟು ಲವ್’ ಸಿನಿಮಾ ಬಳಿಕ ‘ವಾಮನ’ ಸೆಟ್‌ಗೆ ಇಳಿದಿದ್ದರು. ಶಂಕರ್ ರಾಮನ್ ನಿರ್ದೇಶನದ ಈ ಚಿತ್ರಕ್ಕೆ ಇದೀಗ ನಾಯಕಿಯ ಆಯ್ಕೆಯಾಗಿದ್ದು, ಕರಾವಳಿಯ ರಚನಾ ರೈ ಧನ್ವೀರ್‌ಗೆ ಜೋಡಿಯಾಗಿ ನಟಿಸಲಿದ್ದಾರೆ.

ಬೆಂಗಳೂರಿನಲ್ಲಿಯೇ‌ ಚಿತ್ರದ ಮೊದಲ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಚೊಚ್ಚಲ ಕನ್ನಡ ಸಿನಿಮಾ. ರಚನಾ ಪಾತ್ರದ ಬಗ್ಗೆ ಚಿತ್ರತಂಡವು ಗುಟ್ಟುಬಿಟ್ಟುಕೊಟ್ಟಿಲ್ಲ. ಬದಲಾಗಿ ಬಬ್ಲಿ ಪಾತ್ರದ ಮೂಲಕ ಪ್ರೇಕ್ಷಕರನ್ನು ರಚನಾ ರಂಜಿಸಲಿದ್ದಾರೆ ಎಂದಷ್ಟೇ ತಿಳಿಸಿದೆ. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ರಚನಾ, ಮಾಡೆಲ್, ಡ್ಯಾನ್ಸರ್ ಹಾಗೆಯೇ ಬರಹಗಾರ್ತಿಯೂ ಆಗಿದ್ದಾರೆ.

‌ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ನಡಿ ಮೂಡಿಬರುತ್ತಿರುವ ‘ವಾಮನ’ಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದಾರೆ. ಮಾಫಿಯಾ ಲೋಕದ ಕಥೆಯ ಜೊತೆ ಆ್ಯಕ್ಷನ್‌ ಎಂಟರ್‌ಟೈನರ್‌ ಸಿನಿಮಾ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.