ಎಕ್ಸ್ ಖಾತೆ; /@diljitdosanjh
ಮುಂಬೈ: 'ಸರ್ದಾರ್ ಜಿ 3' ಸಿನಿಮಾದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಜತೆಗೆ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ನಟಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮರ್ ಹುಂದಾಲ್ ನಿರ್ದೇಶನದ ಈ ಚಿತ್ರವು ಪಂಜಾಬಿ ಹಾರರ್ ಕಾಮಿಡಿ ಫ್ರಾಂಚೈಸ್‌ನ ಮೂರನೇ ಭಾಗವಾಗಿದೆ. ದೋಸಾಂಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಟ್ರೇಲರ್ ಅನ್ನು ಹಂಚಿಕೊಂಡಿದ್ದರು. ವಿಶ್ವದಾದ್ಯಂತ ಬಿಡುಗಡೆಯಾಗಬೇಕಿದ್ದ ಚಿತ್ರವು ಜೂನ್ 27ರಂದು ವಿದೇಶಗಳಲ್ಲಿ ಮಾತ್ರವೇ ಬಿಡುಗಡೆಯಾಗಲಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪೋಸ್ಟ್‌ನ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದೋಸಾಂಜ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದು, ಆತನನ್ನು ಬಹಿಷ್ಕರಿಸಿ, ದೇಶದ್ರೋಹಿ, ದೇಶ ಮೊದಲು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಚಿತ್ರವನ್ನು ಸ್ಟೋರಿ ಟೈಮ್ ಪ್ರೊಡಕ್ಷನ್ಸ್ ಜೊತೆಗೆ ವೈಟ್ ಹಿಲ್ ಸ್ಟುಡಿಯೋಸ್‌ನ ಗುನ್‌ಬೀರ್ ಸಿಂಗ್ ಸಿಧು ಮತ್ತು ಮನ್ಮಾರ್ಡ್ ಸಿಧು ನಿರ್ಮಿಸಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಹನಿಯಾ , ಫವಾದ್ ಖಾನ್, ಮಹಿರಾ ಖಾನ್, ಅಲಿ ಜಾಫರ್, ಅತಿಫ್ ಅಸ್ಲಾಂ ಮತ್ತು ರಹತ್ ಫತೇಹ್ ಅಲಿ ಖಾನ್ ಸೇರಿದಂತೆ ಪಾಕಿಸ್ತಾನಿ ಕಲಾವಿದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಯಿತು.
ವಾಣಿ ಕಪೂರ್ ಜೊತೆಗೆ ಫವಾದ್ ಅವರ ‘ಅಬೀರ್ ಗುಲಾಲ್‘ ಚಿತ್ರ ಕೂಡ ಭಾರತದಲ್ಲಿ ಬಿಡುಗಡೆಯಾಗಲು ಅವಕಾಶ ನೀಡಿಲ್ಲ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್, ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.