ADVERTISEMENT

Photos| ಕತ್ರೀನಾ ಕೈಫ್‌–ವಿಕ್ಕಿ ಕೌಶಲ್‌ ಅದ್ದೂರಿ ಮದುವೆಯ ಚಿತ್ರಗಳು

ಬಾಲಿವುಡ್ ನಟಿ ಕತ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಗುರುವಾರ ನಡೆದಿದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ನಡೆದಿದೆ.ಸದ್ಯದಲ್ಲೇ ಮುಂಬೈಯಲ್ಲಿ ಔತಣಕೂಟ ಆಯೋಜಿಸುವುದಾಗಿ ನವ ಜೋಡಿ ತಿಳಿಸಿದೆ.

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 3:51 IST
Last Updated 10 ಡಿಸೆಂಬರ್ 2021, 3:51 IST
ಬಾಲಿವುಡ್ ನಟಿ ಕತ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಗುರುವಾರ ನಡೆದಿದೆ.
ಬಾಲಿವುಡ್ ನಟಿ ಕತ್ರೀನಾ ಕೈಫ್‌ ಹಾಗೂ ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಗುರುವಾರ ನಡೆದಿದೆ.   
ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹ ಸಮಾರಂಭ ನಡೆದಿದೆ. ವಿವಾಹಪೂರ್ವ ಸಮಾರಂಭಗಳು ಡಿಸೆಂಬರ್ 7ರಿಂದಲೇ ಆರಂಭಗೊಂಡಿದ್ದವು.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿರುವ ಕತ್ರೀನಾ, ‘ಈ ಕ್ಷಣ ನಮ್ಮ ಬಾಳಿನಲ್ಲಿ ಮೂಡಿಬರಲು ಕಾರಣವಾದ ಎಲ್ಲರಿಗೂ ಹೃದಯಾಂತರಾಳದ ಪ್ರೀತಿ ಮತ್ತು ಕೃತಜ್ಞತೆಗಳು. ನಾವು ಜೊತೆಯಾಗಿ ಈ ಹೊಸ ಪಯಣವನ್ನು ಆರಂಭಿಸುತ್ತಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಬಯಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ವಿವಾಹ ಸಮಾರಂಭಕ್ಕೆ ಕತ್ರೀನಾ ಅವರು ಖ್ಯಾತ ವಸ್ತ್ರವಿನ್ಯಾಸಕ ಸವ್ಯವಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ್ದ ಲೆಹಂಗಾ ಧರಿಸಿದ್ದರೆ, ವಿಕ್ಕಿ ಕೌಶಲ್ ಶೇರ್ವಾನಿ ಧರಿಸಿ ಮಿಂಚಿದರು.
ವಿವಾಹ ಸಮಾರಂಭವು ತೀರಾ ಖಾಸಗಿಯಾಗಿ ನಡೆದಿದೆ.
ಮದುವೆಗೆ ಆಹ್ವಾನಿಸದವರಿಗಾಗಿ ಸದ್ಯದಲ್ಲೇ ಮುಂಬೈಯಲ್ಲಿ ಔತಣಕೂಟ ಆಯೋಜಿಸುವುದಾಗಿ ನವ ಜೋಡಿ ತಿಳಿಸಿದೆ. (ಐಎಎನ್‌ಎಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.