ADVERTISEMENT

ಶಾರುಖ್‌ ಖಾನ್‌ ನಟನೆಯ ‘ಕಿಂಗ್‌’ ಸಿನಿಮಾ 2026ಕ್ಕೆ ರಿಲೀಸ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 0:30 IST
Last Updated 4 ನವೆಂಬರ್ 2025, 0:30 IST
ಶಾರುಖ್‌ ಖಾನ್‌ 
ಶಾರುಖ್‌ ಖಾನ್‌    

‘ಪಠಾಣ್‌’ ಸಿನಿಮಾ ನಿರ್ದೇಶಿಸಿದ್ದ ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ, ಶಾರುಖ್‌ ಖಾನ್‌ ನಟನೆಯ ಹೊಸ ಸಿನಿಮಾ ‘ಕಿಂಗ್‌’ 2026ರಲ್ಲಿ ತೆರೆಕಾಣಲಿದೆ. 

ಬಾಕ್ಸ್‌ ಆಫೀಸ್‌ನಲ್ಲಿ ‘ಪಠಾಣ್‌’ ಹಣ ಬಾಚಿತ್ತು. 2023ರಲ್ಲಿ ತೆರೆಕಂಡ ‘ಡಂಕಿ’ ಬಳಿಕ ಶಾರುಖ್‌ ಖಾನ್‌ ಸಿನಿಮಾಗಳೇ ತೆರೆಕಂಡಿಲ್ಲ. ಭಾನುವಾರ (ನ.2) ಅವರ ಜನ್ಮದಿನದಂದು ‘ಕಿಂಗ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್ಮೆಂಟ್‌ ಮತ್ತು ಮಾರ್ಫ್ಲಿಕ್ಸ್‌ ಪಿಕ್ಚರ್ಸ್‌ ನಿರ್ಮಾಣ ಮಾಡಿದೆ.

ಹೊಸ ಸಿನಿಮಾದಲ್ಲಿ ಭಿನ್ನವಾದ ಲುಕ್‌ನಲ್ಲಿ ಹೊಸ ಅವತಾರದಲ್ಲಿ ಶಾರುಖ್‌ ಖಾನ್‌ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಭರ್ಜರಿಯಾದ ಆ್ಯಕ್ಷನ್‌ ಸೀಕ್ವೆನ್ಸ್‌ ಟೀಸರ್‌ನಲ್ಲಿದೆ. ಚಿತ್ರದಲ್ಲಿ ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್‌ ನಟಿಸುತ್ತಿದ್ದು, ನಟಿ ದೀಪಿಕಾ ಪಡುಕೋಣೆ ಜೋಡಿಯಾಗಿದ್ದಾರೆ. ಈ ಹಿಂದೆ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್‌’, ‘ಪಠಾಣ್‌’ ಹಾಗೂ ‘ಜವಾನ್‌’ನಲ್ಲಿ ಶಾರುಖ್‌ ಖಾನ್‌ ಜೊತೆ ದೀಪಿಕಾ ನಟಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.