ಬೆಂಗಳೂರು: ಶಾರುಕ್ ಖಾನ್ ಅಭಿನಯದ ಹಿಂದಿ ಸಿನಿಮಾ ‘ಡಂಕಿ’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ₹400 ಕೋಟಿ ದಾಟಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಬಾಕ್ಸ್ ಆಫೀಸ್ ಗಳಿಕೆ ಕುರಿತಂತೆ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್, ‘ಎಕ್ಸ್‘ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ.
ನೀವು ‘ಡಂಕಿ‘ ಸಿನಿಮಾ ಮೇಲೆ ತೋರುತ್ತಿರುವ ಪ್ರೀತಿಯಿಂದಾಗಿ ಚಿತ್ರವು ವಿಶ್ವದಾದ್ಯಂತ ₹400.40 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಪೋಸ್ಟ್ನಲ್ಲಿ ಹೇಳಿದೆ.
ನೈಜ ಘಟನೆ ಆಧರಿತ ಈ ಚಿತ್ರವನ್ನು ಮುನ್ನಾಬಾಯಿ ಎಂಬಿಬಿಎಸ್, 3 ಈಡಿಯಟ್ಸ್ ಚಿತ್ರಗಳ ನಿರ್ದೇಶಕ ರಾಜಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ
ಚಿತ್ರವು ‘ಡಾಂಕಿ ಫ್ಲೈಟ್’ಎಂಬ ಅಕ್ರಮ ವಲಸೆ ತಂತ್ರಗಾರಿಕೆಯ ಕಥಾಹಂದರವನ್ನು ಹೊಂದಿದ್ದು, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ ಕೊಚ್ಚಾರ್ ಮತ್ತು ಅನಿಲ್ ಗ್ರೋವರ್ ತಾರಾಗಣವಿದೆ.
ಈ ವರ್ಷ (2023) ಬಿಡುಗಡೆಗೊಂಡ ಶಾರುಖ್ ಅವರ ಮೂರನೇ ಚಿತ್ರ ಇದಾಗಿದೆ. ಶಾರುಕ್ ಅವರ ಪಠಾಣ್ ಮತ್ತು ಜವಾನ್ ಚಿತ್ರಗಳಿಗೆ ಹೋಲಿಸಿದರೆ ‘ಡಂಕಿ’ ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡಿದೆ.
ವಿಶ್ವದಾದ್ಯಂತ ಪಠಾಣ್ ₹1,050.30 ಕೋಟಿ ಹಾಗೂ ಜವಾನ್ ಚಿತ್ರ ₹1,148.32 ಕೋಟಿ ಗಳಿಕೆ ಕಂಡಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.