ಬೆಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿರಾಜ್ ಕುಂದ್ರಾ ಜೈಲಿಗೆ ಹೋಗಿ ಬಂದ ಬಳಿಕಬಳಿಕ ವೈಯಕ್ತಿಕ ಜೀವನದಲ್ಲಿ ನೋವು ಅನುಭವಿಸಿದ್ದಾರೆ. ಜತೆಗೆ ವಿವಿಧ ಸಾರ್ವಜನಿಕೆ ವೇದಿಕೆ ಮತ್ತು ಸಾಮಾಜಿಕ ತಾಣಗಳ ಮೂಲಕವೂ ಅದನ್ನು ವ್ಯಕ್ತಪಡಿಸಿದ್ದಾರೆ.
ಅದೆಲ್ಲದರ ಮಧ್ಯೆ, ಸೂಪರ್ ಡ್ಯಾನ್ಸರ್ 4 ಸೀಸನ್ ಸೆಟ್ನಲ್ಲಿ ನವರಾತ್ರಿ ವಿಶೇಷದ ಸಂದರ್ಭ ಗರ್ಭಾ ನೃತ್ಯ ಮಾಡಿದ್ದಾರೆ.
ಸೂಪರ್ ಡ್ಯಾನ್ಸರ್ 4 ಸ್ಪರ್ಧಿಗಳ ಜತೆ ನೃತ್ಯ ಮಾಡುತ್ತಿರುವ ವಿಡಿಯೊ ಒಂದನ್ನು ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೂಪರ್ ಡ್ಯಾನ್ಸರ್ 4 ಸೀಸನ್ ಫಿನಾಲೆ ಸಂಚಿಕೆಯಲ್ಲಿ ಈ ಬಾರಿ ನವರಾತ್ರಿ ವಿಶೇಷ ಇರಲಿದ್ದು, ಈ ಬಗ್ಗೆ ಶಿಲ್ಪಾ ಸುಳಿವು ನೀಡಿದ್ದಾರೆ.
ಶಿಲ್ಪಾ ಶೆಟ್ಟಿ, ಗೀತಾ ಕಪೂರ್ ಮತ್ತು ಅನುರಾಗ್ ಬಸು ಅವರು ಸೂಪರ್ ಡ್ಯಾನ್ಸರ್ 4 ಸೀಸನ್ ತೀರ್ಪುಗಾರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.