ADVERTISEMENT

Sandalwood: ‘ಕವಳ’ ಶೀರ್ಷಿಕೆ ಅನಾವರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:00 IST
Last Updated 18 ಫೆಬ್ರುವರಿ 2026, 5:00 IST
‘ಕವಳ’ ಶೀರ್ಷಿಕೆ ಅನಾವರಣಗೊಳಿಸಿದ ಶಿವರಾಜ್‌ಕುಮಾರ್‌ 
‘ಕವಳ’ ಶೀರ್ಷಿಕೆ ಅನಾವರಣಗೊಳಿಸಿದ ಶಿವರಾಜ್‌ಕುಮಾರ್‌    

ಶ್ರೀ ಜೈ ನಿರ್ದೇಶನದ ‘ಕವಳ’ ಎಂಬ ಸಿನಿಮಾದ ಶೀರ್ಷಿಕೆಯನ್ನು ನಟ ಶಿವರಾಜ್‌ಕುಮಾರ್‌ ಇತ್ತೀಚೆಗೆ ಅನಾವರಣಗೊಳಿಸಿದರು. 

ಮಾಸ್, ಆ್ಯಕ್ಷನ್ ಕಾಂಟೆಂಟ್‌ ಇರುವ ಈ ಸಿನಿಮಾ ಫೆ. 26ಕ್ಕೆ ಸೆಟ್ಟೇರಲಿದೆ. ಸಿನಿಮಾವನ್ನು ರಾಧಾಕೃಷ್ಣ ಆರ್ಟ್ಸ್ ಹಾಗೂ ಡ್ರೀಮ್ ವರ್ಲ್ಡ್ ಸಿನಿಮಾಸ್ ಮೂಲಕ ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ಅವರು ನಿರ್ಮಿಸುತ್ತಿದ್ದಾರೆ.

ಶ್ರೀ ಜೈ ಈ ಹಿಂದೆ ದುನಿಯಾ ವಿಜಯ್‌ ನಟನೆಯ ‘ಆರ್‌.ಎಕ್ಸ್‌.ಸೂರಿ’ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ‘ಭೈರಾದೇವಿ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇದೀಗ ‘ಕವಳ’ ಎಂಬ ಸಿನಿಮಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಸಂದೀಪ್ ನಾಗರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಪೋಸ್ಟರ್ ಭಿನ್ನವಾಗಿದ್ದು, ನೀಲವರ್ಣದ, ರುದ್ರಾಕ್ಷಿ ಧರಿಸಿದ ಕೈಯಲ್ಲಿ ಮಚ್ಚು ಕೊಡಲಾಗಿದೆ. ಚಿತ್ರಕ್ಕೆ ಎ.ಕರುಣಾಕರನ್ ಛಾಯಾಚಿತ್ರಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ, ಅರ್ಜುನ್ ರಾಜ್, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಕಲೈ, ಮುರಳಿ ನೃತ್ಯ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನವಿದೆ.

ADVERTISEMENT

‘ಕವಳ’ ಚಿತ್ರದಲ್ಲಿ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಸಮುದ್ರಖನಿ, ಈಶ್ವರಿ ರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್, ಗಿಲ್ಲಿ, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.