ADVERTISEMENT

‘ಆಯುಷ್ಮಾನ್‌ಭವ’ ಚಿತ್ರದ ಟ್ರೇಲರ್‌ ಬಿಡುಗಡೆ ಶುರುವಾಗಿದೆ ಕಾತರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 12:26 IST
Last Updated 26 ಅಕ್ಟೋಬರ್ 2019, 12:26 IST
ಆಯುಷ್ಮಾನ್‌ಭವ
ಆಯುಷ್ಮಾನ್‌ಭವ   

‘ಸೆಂಚುರಿ ಸ್ಟಾರ್‌’ ಶಿವರಾಜ್‌ಕುಮಾರ್‌ ಮತ್ತು ‘ಡಿಂಪಲ್‌ ಕ್ವೀನ್’ ರಚಿತಾ ರಾಮ್‌ ನಟಿಸಿರುವ ‘ಆಯುಷ್ಮಾನ್‌ಭವ’ ಚಿತ್ರ ಕುತೂಹಲ ಹೆಚ್ಚಿಸಿದೆ. ಈ ಚಿತ್ರದ ಕಥೆಯು ಸೈಕಲಾಜಿಕಲ್‌ ಎಳೆ ಹೊಂದಿದ್ದು, ಪಿ. ವಾಸು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಈ ಸಿನಿಮಾದ ಟ್ರೇಲರ್‌ ಅಕ್ಟೋಬರ್‌ 27ರಂದು ಮಧ್ಯಾಹ್ನ 12.07ಕ್ಕೆ ಬಿಡುಗಡೆಯಾಗಲಿದೆ. ಅಂದಹಾಗೆ ನವೆಂಬರ್‌ 1ರಂದು ಚಿತ್ರ ಬಿಡುಗಡೆಯಾಗಲಿದೆ.

ದ್ವಾರಕೀಶ್‌ ಚಿತ್ರಾಲಯ ಸಂಸ್ಥೆಯಿಂದ ನಿರ್ಮಿಸಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಅನಂತ್‌ನಾಗ್‌, ಪ್ರಭು ನಟಿಸಿದ್ದಾರೆ. ನಟಿ ನಿಧಿ ಸುಬ್ಬಯ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ಇದು ಅವರು ಸಂಗೀತ ಸಂಯೋಜನೆಯ ನೂರನೇ ಚಿತ್ರವೂ ಹೌದು. ಪಿ.ಕೆ.ಎಚ್. ದಾಸ್‌ ಅವರ ಛಾಯಾಗ್ರಹಣವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.