ADVERTISEMENT

ನಟ ಕಮಲ್ ಹಾಸನ್‌ ಪುತ್ರಿಯರ ಪುನರ್ಮಿಲನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 7:31 IST
Last Updated 27 ನವೆಂಬರ್ 2021, 7:31 IST
ಶ್ರುತಿ ಹಾಗೂ ಅಕ್ಷರ
ಶ್ರುತಿ ಹಾಗೂ ಅಕ್ಷರ   

ಚೆನ್ನೈ: ತಮಿಳು ಸೂಪರ್ ಸ್ಟಾರ್ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರು ಕೋವಿಡ್‌ಗೆ ಒಳಗಾಗಿದ್ದು ಪುತ್ರಿಯರಾದ ಶ್ರುತಿ ಹಾಗೂ ಅಕ್ಷರಾಅವರನ್ನು ನೋಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಶ್ರುತಿ ಹಾಸನ್‌ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದು ನಮ್ಮ ಪುನರ್ಮಿಲನ ಎಂದೂ ಅವರು ಹೇಳಿದ್ದಾರೆ. ಇಬ್ಬರು ಕೂಡ ಮನೆಯಲ್ಲಿ ಇರುವ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಕಮಲ್‌ ಇಲ್ಲಿನ ಮೆಡಿಕಲ್‌ ಕಾಲೇಜಿನಲ್ಲಿ ಐಸೊಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಅವರು ಸಾಮಾಜಿಕ ಕಳಕಳಿಯಿಂದ ‘ಕೋವಿಡ್–19 ಸಾಂಕ್ರಾಮಿಕ ಸಂಪೂರ್ಣವಾಗಿ ಹೋಗಿಲ್ಲ ಎನ್ನುವುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ’ಎಂದು ಅವರು ಟ್ವೀಟ್ ಮಾಡಿದ್ದರು.

ADVERTISEMENT

ತಮಿಳು ಸೂಪರ್ ಸ್ಟಾರ್ ಮತ್ತು ‘ಮಕ್ಕಳ್ ನೀದಿ ಮೈಯಂ’ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರು ಕೋವಿಡ್‌ಗೆ ಒಳಗಾಗಿದ್ದು ಪುತ್ರಿಯರಾದ ಶ್ರುತಿ ಹಾಗೂ ಅಕ್ಷರ ಅವರನ್ನು ನೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.