ADVERTISEMENT

ನಿಮ್ಮ ತುಟಿಯ ಸೈಜ್‌ ಎಷ್ಟು? ನೆಟ್ಟಿಗನ ಪ್ರಶ್ನೆಗೆ ಶ್ರುತಿ ಹಾಸನ್‌ ಉತ್ತರವೇನು?

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 10:52 IST
Last Updated 17 ಏಪ್ರಿಲ್ 2022, 10:52 IST
ಶ್ರುತಿ ಹಾಸನ್‌
ಶ್ರುತಿ ಹಾಸನ್‌   

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್‌ ಅವರು ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್‌ ಆಗಿದ್ದಾರೆ. ವಿಚಿತ್ರ ಪ್ರಶ್ನೆ ಕೇಳಿದ ನೆಟ್ಟಿಗರೊಬ್ಬರಿಗೆ ಸಮಾಧಾನದಿಂದ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಶ್ರುತಿ ಅವರು ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದಿದ್ದರು. ಅಭಿಮಾನಿಗಳಿಗೆ ಏನು ಬೇಕಾದರೂ ಕೇಳಬಹುದು ಎಂಬ ಲೈವ್‌ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ವೇಳೆ ಅಭಿಮಾನಿಗಳು ನಟಿಯ ಫಿಟ್ನೆಸ್‌, ಆಹಾರ, ಸೌಂದರ್ಯ, ಉಡುಪು, ಮುಂದಿನ ಸಿನಿಮಾಗಳು ಹಾಗೂ ಅವರ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಮತ್ತೆ ಕೆಲವರು ನಟಿಗೆ ಮುಜುಗರ ತರುವಂತಹ ಪ್ರಶ್ನೆಗಳನ್ನು ಹಾಕಿದ್ದರು.

ಇದೇ ಕಾರ್ಯಕ್ರಮದಲ್ಲಿ ನೆಟ್ಟಿಗರೊಬ್ಬರು ನಿಮ್ಮ ತುಟಿಗಳ ಸೈಜ್‌ ಎಷ್ಟು? ಎಂದು ಕೇಳಿದ್ದರು. ತುಟಿಗಳಿಗೂ ಸೈಜ್‌ ಇರುತ್ತಾ? ಎಂದು ಮರು ಪ್ರಶ್ನೆ ಹಾಕುವ ಮೂಲಕ ಶ್ರುತಿ ಸಮಾಧಾನದಿಂದಲೇ ಉತ್ತರ ನೀಡಿದ್ದರು.

ADVERTISEMENT

ಈ ವಿಚಾರದಲ್ಲಿ ಅವರು ಬಾಡಿ ಶೇಮಿಂಗ್‌ನಂತಹ ವಿಚಾರಗಳನ್ನು ಮಾತನಾಡದೇ ಸಮಾಧಾನದಿಂದ ಉತ್ತರ ಕೊಟ್ಟು, ಅಭಿಮಾನಿಗಳ ಬೇರೆ ಪ್ರಶ್ನೆಗಳನ್ನು ತೆಗೆದುಕೊಂಡಿದ್ದು ವಿಶೇಷ.

ಈ ಹಿಂದೆ ಹಲವು ಸಲ ಆನ್‌ಲೈನ್‌ನಲ್ಲಿ ಬಾಡಿ ಶೇಮಿಂಗ್‌ ಪ್ರಶ್ನೆಗಳನ್ನು ಶ್ರುತಿ ಎದುರಿಸಿದ್ದರು. ಆ ಬಗ್ಗೆ ಬೇಸರ ವ್ಯಕ್ತಪಡಿಸಿ ಹಲವಾರು ಪೋಸ್ಟ್‌ಗಳನ್ನು ಅವರು ಪ್ರಕಟಿಸಿದ್ದರು. ಆದರೆಈ ವಿಚಾರದಲ್ಲಿ ಶ್ರುತಿ ನಡೆಯನ್ನುಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಶ್ರುತಿ ಅವರು ಪ್ರಬುದ್ಧತೆಯಿಂದ ವರ್ತಿಸಿದ್ದಾರೆಎಂದುಹೇಳಿದ್ದಾರೆ.

ಸದ್ಯ ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.