ADVERTISEMENT

VIDEO | ಸಮಂತಾ ಮದುವೆ ಬೆನ್ನಲ್ಲೇ ಶೋಭಿತಾ ಧೂಲಿಪಾಲ ಹೊಸ ಪೋಸ್ಟ್: ಏನದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2025, 11:54 IST
Last Updated 4 ಡಿಸೆಂಬರ್ 2025, 11:54 IST
<div class="paragraphs"><p>ನಟಿ ಸಮಂತಾ  </p></div>

ನಟಿ ಸಮಂತಾ

   

ಚಿತ್ರ: ಇನ್‌ಸ್ಟಾಗ್ರಾಂ

ಇತ್ತೀಚೆಗೆ ಸಮಂತಾ ಪ್ರಭು ಅವರು ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜ್ ನಿಡಿಮೊರು ‌ಜೊತೆಗೆ ಮದುವೆ ಆಗಿದ್ದರು. ಮದುವೆ ಫೋಟೊಗಳನ್ನು ನಟಿ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ವಿವಾಹದ ಚಿತ್ರಗಳನ್ನು ನೋಡಿದ ಅಭಿಮಾನಿಗಳು ನವ ಜೋಡಿಗೆ ಶುಭ ಹಾರೈಸಿದ್ದರು.

ಇದೀಗ ಸಮಂತಾ ಮದುವೆ ಬೆನ್ನಲ್ಲೇ ನಟಿ ಶೋಭಿತಾ ಧೂಲಿಪಾಲ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷ ಕಳೆದಿದೆ. ಹೀಗಾಗಿ ಮೊದಲ ಮದುವೆ ವಾರ್ಷಿಕೋತ್ಸವದ ವಿಡಿಯೊವನ್ನು ಶೋಭಿತಾ ಧೂಲಿಪಾಲ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾಗ ಚೈತನ್ಯ ಅವರು ಶೋಭಿತಾ ಧೂಲಿಪಾಲ ಕೊರಳಿಗೆ ತಾಳಿ ಕಟ್ಟುತ್ತಿರುವ ವಿಡಿಯೊವನ್ನು ಹಂಚಿಕೊಂಡ ಅವರು, ಪೋಸ್ಟ್ ಜೊತೆಗೆ ‘ಯಾವಾಗಲೂ ಗಾಳಿ ಮನೆ ಕಡೆ ಬೀಸುತ್ತದೆ. ಸೂರ್ಯನಂತೆ ನನ್ನ ಗಂಡ ಜೊತೆಗಿದ್ದಾನೆ. ಆ ಅನುಭವ ನನಗೆ ಹೊಸತನ ಭಾಸವಾಗುತ್ತದೆ. ಬೆಂಕಿಯಿಂದ ಶುದ್ಧಳಾದಂತೆ ಅನಿಸುತ್ತದೆ. ಶ್ರೀಮತಿಯಾಗಿ ಒಂದು ವರ್ಷ’ ಎಂದು ಬರೆದುಕೊಂಡಿದ್ದಾರೆ.

2024 ಡಿಸೆಂಬರ್ 4ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಾಗ ಚೈತನ್ಯ ಅವರು ಶೋಭಿತಾ ಧೂಲಿಪಾಲ ಅನ್ನಪೂರ್ಣ ಸ್ಟುಡಿಯೋದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವಿವಾಹ ಸಮಾರಂಭವು ಸುಂದರವಾಗಿ ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.