ADVERTISEMENT

ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 12:56 IST
Last Updated 10 ಅಕ್ಟೋಬರ್ 2018, 12:56 IST
ಸೋಹಾ ಅಲಿ ಖಾನ್, ತನುಶ್ರೀ ದತ್ತಾ, ನೇಹಾ ಧೂಪಿಯಾ
ಸೋಹಾ ಅಲಿ ಖಾನ್, ತನುಶ್ರೀ ದತ್ತಾ, ನೇಹಾ ಧೂಪಿಯಾ   

ಭಾರತದಲ್ಲಿ ಮಹಿಳೆಯೊಬ್ಬಳು ಬದುಕುವುದು ಕಷ್ಟ ಎಂದು ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಅಭಿಪ್ರಾಯಪಟ್ಟಿದ್ದಾರೆ. ನಟಿ ತನುಶ್ರೀ ದತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ‘Metoo' ಅಭಿಯಾನಕ್ಕೆ ಬೆಂಬಲ ಸೂಚಿಸಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಮಹಿಳೆಯರು ಈಗಲಾದರೂ ತಮ್ಮ ಮೇಲೆ ನಡೆದಿರುವ ದೌರ್ಜನ್ಯಗಳ ಕುರಿತು ಮಾತನಾಡಲು ಮುಂದಾಗಿರುವುದು ಸಂತಸಕರ ಸಂಗತಿ. ಭಾರತದಲ್ಲಿ ಮಹಿಳೆಯಾಗಿ ಬದುಕು ನಡೆಸುವುದು ಕಷ್ಟ. ನಿತ್ಯವೂ ಅವಳ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿರುತ್ತವೆ’ ಎಂದು ಸೋಹಾ ಹೇಳಿದ್ದಾರೆ.

‘ತಮ್ಮ ಮೇಲಿನ ದೌರ್ಜನ್ಯಗಳ ಕುರಿತು ಮಹಿಳೆಯರು ಮಾತನಾಡಲು ಮುಂದಾಗಿರುವುದು ನಿಜಕ್ಕೂ ಧೈರ್ಯದ ಕೆಲಸ. ಇಂಥ ಸಂಗತಿಗಳನ್ನು ಮಾತನಾಡಲು ನಾವು ಮಹಿಳೆಯರಿಗೆ ಬೆಂಬಲ ನೀಡಬೇಕು. ಯಾರಾದರೂ ಇಂಥ ಸಂಗತಿಗಳನ್ನು ಹಂಚಿಕೊಳ್ಳಲು ಮುಂದೆ ಬಂದರೆ, ನಾನಂತೂ ಅವರ ಪರವಾಗಿ ಸದಾ ನಿಲ್ಲುತ್ತೇನೆ’ ಎಂದೂ ಅವರು ಬೆಂಬಲಿಸಿ ಮಾತನಾಡಿದ್ದಾರೆ.

ADVERTISEMENT

ಸೋಹಾ ಅಲಿ ಮಾತಿಗೆ ದನಿಗೂಡಿಸಿರುವ ಮತ್ತೊಬ್ಬ ನಟಿ ನೇಹಾ ಧೂಪಿಯಾ ‘ನಟಿಯಾಗಿ ಅಲ್ಲ, ಆದರೆ, ಒಬ್ಬ ಮಹಿಳೆಯಾಗಿಈ ಪ್ರಕರಣದ ಬಗ್ಗೆ ಓದಿದಾಗ, ಕೇಳಿದಾಗ ನನ್ನಲ್ಲಿ ಆಕ್ರೋಶ ಮೂಡಿತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.