ವಿಜಯ್ ರಾಘವೇಂದ್ರ ನಟನೆಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರ ಬಿಡುಗಡೆಯಾಗಿದೆ. ಅಣ್ಣನ ಚಿತ್ರವನ್ನು ವೀಕ್ಷಿಸಿದ ನಟ ಶ್ರೀಮುರುಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀಮುರುಳಿ, ‘ಎಲ್ಲರೂ ನೋಡಲೇಬೇಕಾದ ಚಿತ್ರವಿದು. ಈ ಚಿತ್ರದಲ್ಲಿ ನನ್ನ ಅಣ್ಣ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರತಿಯೊಂದು ಕ್ಷಣವು ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ .
ಈ ಚಿತ್ರದಲ್ಲಿ ನಿರ್ದೇಶನ, ಕಥೆ, ಸಂಗೀತ, ನಟನೆ, ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ನನ್ನ ಅಣ್ಣನ ಸಿನಿಮಾ ಎಂದು ಈ ಚಿತ್ರವನ್ನು ಹೊಗಳುತ್ತಿಲ್ಲ. ನಿಜವಾಗಿಯೂ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರ ಚೆನ್ನಾಗಿದೆ. ನನಗೆ ಇಷ್ಟರ ಮಟ್ಟಿಗೆ ಸಿನಿಮಾ ಇಷ್ಟವಾಗುವುದು ಬಹಳ ಅಪರೂಪ. ಈ ಸಿನಿಮಾವನ್ನು ಎಲ್ಲರೂ ಸೇರಿ ಉಳಿಸಿಕೊಳ್ಳೋಣ.. ಬೆಳೆಸೋಣ' ಎಂದು ಬರೆದುಕೊಂಡಿದ್ದಾರೆ.
ದೇವಿಪ್ರಸಾದ್ ಶೆಟ್ಟಿ ಅವರು ಈ ಚಿತ್ರವನ್ನುನಿರ್ದೇಶಿಸಿದ್ದು, ಸಾತ್ವಿಕ್ ಹೆಬ್ಬಾರ್ ಅವರು ನಿರ್ಮಾಣ ಮಾಡಿದ್ದಾರೆ.
ವಿಜಯ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಸೇರಿ ಅನೇಕರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.