ADVERTISEMENT

ನಟಿ ಶ್ರೀಲೀಲಾ ಅವರ ಕೆನ್ನೆ ಹಿಡಿದು ಮುದ್ದಿಸಿದ ವಯೋವೃದ್ಧರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 6:07 IST
Last Updated 20 ನವೆಂಬರ್ 2025, 6:07 IST
   

ಶೂಟಿಂಗ್ ಸೆಟ್‌ನಲ್ಲಿ ವಯೋವೃದ್ಧರು ನಟಿ ಶ್ರೀಲೀಲಾ ವರ ಕೆನ್ನೆ ಹಿಡಿದು ಮುದ್ದು ಮಾಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಯೋವೃದ್ಧರ ಜತೆಗಿನ ವಿಡಿಯೊ ಹಂಚಿಕೊಂಡ ನಟಿ ಶ್ರೀಲೀಲಾ, ‘ಬೀಟ್ಸ್ ವಿಥ್ ತಂಗಮ್ ಬೇಬಿಸ್’ ಎಂದು ಬರೆದುಕೊಂಡಿದ್ದಾರೆ.

ಶ್ರೀಲೀಲಾ ಅವರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಕ್ರೀಯವಾಗಿರುವ ಇವರು ಸದ್ಯ, ನಟ ಕಾರ್ತಿಕ್ ಆರ್ಯನ್ ಜತೆ ನಟಿಸುತ್ತಿದ್ದಾರೆ.

ADVERTISEMENT

ಶ್ರೀಲೀಲಾ ‘ಕಿಸ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ‘ಭರಾಟೆ‘, ‘ಬೈ ಟು ಲವ್’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟನೆ ಮಾತ್ರವಲ್ಲದೇ, ಪುಷ್ಪ2 ಚಿತ್ರದ 'ಕಿಸ್ಸಿಕ್', ಹಾಗೂ ಜೂನಿಯರ್ ಚಿತ್ರದ ‘ವೈರಲ್ ವೈಯ್ಯಾರಿ’ ಹಾಡಿನ ನೃತ್ಯಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.