ADVERTISEMENT

ಜನವರಿ 21ಕ್ಕೆ ಫ್ಯಾಂಟಮ್ ತಂಡ ಕೊಡಲಿರುವ ಸರ್ಪ್ರೈಸ್ ಏನು?

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 9:11 IST
Last Updated 18 ಜನವರಿ 2021, 9:11 IST
ಫ್ಯಾಂಟಮ್‌
ಫ್ಯಾಂಟಮ್‌   

ಚಂದನವನದ ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ಫ್ಯಾಂಟಮ್‌. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಫ್ಯಾಂಟಮ್‌ನಲ್ಲಿ ಬಾಲಿವುಡ್‌ನ ಖ್ಯಾತನಾಮರು ನಟಿಸುತ್ತಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾನೇ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಸಿನಿಮಾದ ಕುರಿತು ದಿನಕ್ಕೊಂದು ಸುದ್ದಿ ಹೊರ ಬರುತ್ತಿದ್ದು, ಜನವರಿ 21ರ ಸಂಜೆ 4ಗಂಟೆ 3 ನಿಮಿಷಕ್ಕೆತಂಡದಿಂದ ವಿಶೇಷವಾದ ಸಂಗತಿಯೊಂದು ಹೊರಬೀಳಲಿದೆ. ಈ ವಿಷಯವನ್ನು ಸ್ವತಃ ಸುದೀಪ್ ಅವರೇ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಂದು ಸಿನಿಮಾ ಪೋಸ್ಟರ್ ಅಥವಾ ಟೀಸರ್ ಬಿಡುಗಡೆಯಾಗುವುದೋ, ಸಿನಿಮಾಕ್ಕೆ ಯಾರಾದರು ಹೊಸದಾಗಿ ಸೇರ್ಪಡೆಯಾಗುತ್ತಾರೋ ಎಂಬುದನ್ನೆಲ್ಲಾ ಕಾದು ನೋಡಬೇಕಿದೆ.

ಫ್ಯಾಂಟಮ್‌ನಲ್ಲಿ ಈಗಾಗಲೇ ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ನಟಿಸುವುದು ಪಕ್ಕಾ ಆಗಿದೆ. ಫ್ಯಾಂಟಸಿ, ಆ್ಯಕ್ಷನ್‌, ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಫ್ಯಾಂಟಮ್ ಚಿತ್ರದ ಟೀಸರ್‌ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡಲು ಯೋಚಿಸಿದೆ ಚಿತ್ರತಂಡ. ಚಿತ್ರಕ್ಕೆ ಅಜನೀಶ್ ಲೋಕ್‌ನಾಥ್ ಸಂಗೀತ ನಿರ್ದೇಶನವಿದೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.