
ನಟ ಸುಂದರ್ ರಾಜ್ ದಂಪತಿ
ಚಿತ್ರ: ಇನ್‌ಸ್ಟಾಗ್ರಾಂ
ಚಂದನವನದ ಖ್ಯಾತ ಹಿರಿಯ ನಟ ಸುಂದರ್ ರಾಜ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 75ನೇ ವಸಂತಕ್ಕೆ ಕಾಲಿಟ್ಟಿರುವ ಸುಂದರ್ ರಾಜ್ ಅವರಿಗೆ ಮೊಮ್ಮಗ ರಾಯನ್ ರಾಜ್ ಸರ್ಜಾ ವಿಶೇಷವಾಗಿ ಶುಭಕೋರಿದ್ದಾರೆ.
ಈ ವಿಡಿಯೊವನ್ನು ನಟಿ ಮೇಘನಾ ರಾಜ್ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ನಮ್ಮ ಕಿರಿಯ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಪ್ರತಿದಿನ ನನ್ನನ್ನು ಬಲಶಾಲಿ ಮತ್ತು ಶಾಂತಗೊಳಿಸುತ್ತೀರಿ. 75ರ ಶುಭಾಶಯಗಳು ಅಪ್ಪಾ’ ಎಂದು ಬರೆದುಕೊಂಡಿದ್ದಾರೆ.
ವಿಡಿಯೊದಲ್ಲಿ ಮೇಘನಾ ರಾಜ್ ಅವರ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ತಾತನಿಗೆ ಹುಟ್ಟುಹಬ್ಬಕ್ಕೆ ಜೋರಾಗಿ ಹಾಡು ಹಾಡುವ ಮೂಲಕ ಶುಭಾಶಯ ತಿಳಿಸಿದ್ದಾನೆ. ಮೊಮ್ಮಗ ಹುಟ್ಟುಹಬ್ಬಕ್ಕೆ ಶುಭಕೋರಿದ್ದನ್ನು ನೋಡಿ ಸುಂದರ್ ರಾಜ್ ಅವರು ಸಖತ್ ಖುಷಿಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.