ADVERTISEMENT

ಸುಶಾಂತ್ ಪ್ರಕರಣ: ಎನ್‌ಸಿಬಿ ಮುಂದೆ 3ನೇ ದಿನ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 5:38 IST
Last Updated 8 ಸೆಪ್ಟೆಂಬರ್ 2020, 5:38 IST
ವಿಚಾರಣೆಗೆ ಹಾಜರಾದ ನಟಿ ರಿಯಾ ಚಕ್ರವರ್ತಿ -ಪಿಟಿಐ ಚಿತ್ರ
ವಿಚಾರಣೆಗೆ ಹಾಜರಾದ ನಟಿ ರಿಯಾ ಚಕ್ರವರ್ತಿ -ಪಿಟಿಐ ಚಿತ್ರ   

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಅವರು ಸತತ ಮೂರನೇ ದಿನ ಮಂಗಳವಾರ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

ಡ್ರಗ್ಸ್‌ ಜಾಲದೊಂದಿಗಿನ ಸಂಪರ್ಕ ಕುರಿತು ಎನ್‌ಸಿಬಿ ಕಳೆದ ಎರಡು ದಿನಗಳಿಂದ ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಸಂಸ್ಥೆಯ ಕಚೇರಿಗೆ ರಿಯಾ ಬೆಳಿಗ್ಗೆ ಸುಮಾರು 10 ಗಂಟೆ ಹೊತ್ತಿಗೆ ಬಂದರು. ಪೊಲೀಸರು ಅವರಿಗೆ ರಕ್ಷಣೆಗೆ ಒದಗಿಸಿದ್ದರು. ರಿಯಾ ಅವರನ್ನು ಇ.ಡಿ. ಹಾಗೂ ಸಿಬಿಐ ಈಗಾಗಲೇ ವಿಚಾರಣೆ ನಡೆಸಿವೆ.

ADVERTISEMENT

ಡ್ರಗ್ಸ್‌ಗೆ ಸಂಬಂಧಿಸಿದಂತೆ ರಿಯಾ ಅವರು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ ದಾಖಲೆ ಹೊರಬಿದ್ದ ಬಳಿಕ ಈ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.