ADVERTISEMENT

ಎನ್‌ಸಿಬಿ ಮುಂದೆ 2ನೇ ದಿನ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

ಪಿಟಿಐ
Published 7 ಸೆಪ್ಟೆಂಬರ್ 2020, 6:00 IST
Last Updated 7 ಸೆಪ್ಟೆಂಬರ್ 2020, 6:00 IST
ರಿಯಾ
ರಿಯಾ   

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಅವರು ಸತತ ಎರಡನೇ ದಿನ ಸೋಮವಾರ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

ಡ್ರಗ್ಸ್‌ ಜಾಲದೊಂದಿಗಿನ ಸಂಪರ್ಕ ಕುರಿತು ಎನ್‌ಸಿಬಿ ಭಾನುವಾರ ರಿಯಾ ಅವರನ್ನು ಆರು ತಾಸು ವಿಚಾರಣೆಗೆ ಒಳಪಡಿಸಿತ್ತು.

ಸಂಸ್ಥೆಯ ಕಚೇರಿಗೆ ರಿಯಾ ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಬಂದರು. ಪೊಲೀಸರು ಅವರಿಗೆ ರಕ್ಷಣೆಗೆ ಒದಗಿಸಿದ್ದರು. ರಿಯಾ ಅವರನ್ನುಇ.ಡಿ. ಹಾಗೂ ಸಿಬಿಐ ಈಗಾಗಲೇ ವಿಚಾರಣೆ ನಡೆಸಿವೆ.

ADVERTISEMENT

ರಿಯಾ ಅವರನ್ನು ಅವರ ಸೋದರ ಶೋವಿಕ್‌ ಅಲ್ಲದೆ ಇತರ ಆರೋಪಿಗಳಾದ ಸ್ಯಾಮುಯೆಲ್‌ ಮಿರಾಂಡಾ ಮತ್ತು ದೀಪೇಶ್‌ ಸಾವಂತ್‌ ಅವರ ಜತೆ ಮುಖಾಮುಖಿಯಾಗಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಡ್ರಗ್ಸ್‌ಗೆ ಸಂಬಂಧಿಸಿದಂತೆ ರಿಯಾ ಅವರು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ ದಾಖಲೆ ಹೊರಬಿದ್ದ ಬಳಿಕ ಈ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.