
ತೆಲುಗು ನಟ ನಿಖಿಲ್ ಸಿದ್ಧಾರ್ಥ್
ತೆಲುಗು ನಟ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ ಸಿನಿಮಾ ‘ಸ್ವಯಂಭು’ 2026ರ ಫೆಬ್ರುವರಿ 13ಕ್ಕೆ ರಿಲೀಸ್ ಆಗಲಿದೆ.
ವಿಶೇಷ ವಿಡಿಯೊವೊಂದರ ಮೂಲಕ ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿರುವ ಮಾಹಿತಿ ಹಂಚಿಕೊಂಡಿದೆ. ಎರಡು ವರ್ಷದ ಹಿಂದೆ ಈ ಸಿನಿಮಾ ಸೆಟ್ಟೇರಿತ್ತು. 170 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆದಿದ್ದು, ಇದು ನಿಖಿಲ್ ಸಿದ್ಧಾರ್ಥ್ ಅವರ 20ನೇ ಚಿತ್ರ. ಪಿಕ್ಸೆಲ್ ಸ್ಟುಡಿಯೊ ಮೂಲಕ ಭುವನ್ ಹಾಗೂ ಶ್ರೀಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಹಸ್ರಮಾನಗಳ ಹಿಂದಿನ ಕಥೆ ಹೊಂದಿರುವ ಈ ಸಿನಿಮಾ ನಿಖಿಲ್ ವೃತ್ತಿಜೀವನದ ಬಿಗ್‌ಬಜೆಟ್ ಚಿತ್ರ. ಕೆ.ಕೆ.ಸೆಂಥಿಲ್ ಕುಮಾರ್ ಛಾಯಾಚಿತ್ರಗ್ರಹಣ, ರವಿ ಬಸ್ರೂರ್ ಸಂಗೀತ, ವಿಜಯ್ ಕಾಮಿಸೆಟ್ಟಿ ಸಂಭಾಷಣೆ ಚಿತ್ರಕ್ಕಿದೆ.
ಭರತ್ ಕೃಷ್ಣಮಾಚಾರಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಸಂಯುಕ್ತ ನಾಯಕಿಯಾಗಿ ನಟಿಸಿದ್ದು, ನಭಾ ನಟೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.