ADVERTISEMENT

ಮೇಯಲ್ಲಿ ತೆರೆಗೆ 'ಟಕ್ಕರ್‌'

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 11:08 IST
Last Updated 16 ಮಾರ್ಚ್ 2022, 11:08 IST
ಮನೋಜ್ ಕುಮಾರ್, ರಂಜನಿ ರಾಘವನ್
ಮನೋಜ್ ಕುಮಾರ್, ರಂಜನಿ ರಾಘವನ್   

ಸೈಬರ್‌ ಕ್ರೈಂ ಕಥಾವಸ್ತುವನ್ನೊಳಗೊಂಡ ‘ಟಕ್ಕರ್‌’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ಜೊತೆಯಾಗಿ ನಟಿಸಿರುವ ಚಿತ್ರವಿದು.

‘ಥ್ರಿಲ್ಲರ್ ಅಂಶಗಳ ಜೊತೆಗೆ ಆ್ಯಕ್ಷನ್‌, ಮಧುರ ಹಾಡುಗಳು ಕೂಡಾ ಟಕ್ಕರ್ ಚಿತ್ರದ ಭಾಗವಾಗಿವೆ’ ಎಂದಿದೆ ಚಿತ್ರತಂಡ. ಈಗಾಗಲೇ ಬಿಡುಗಡೆಯಾಗಿರುವ ಡ್ಯುಯೆಟ್ ಹಾಡು ಕೇಳುಗರನ್ನು ಸೆಳೆದಿದೆ. ಟೈಟಲ್ ಸಾಂಗ್ ಸೇರಿದಂತೆ ಉಳಿದ ಎರಡು ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ಟ್ರೇಲರ್ ಕೂಡಾ ಶೀಘ್ರದಲ್ಲೇ ಹೊರಬರಲಿದೆ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ನಾಗೇಶ್ ಕೋಗಿಲು ಅವರು ಯೋಜನೆ ರೂಪಿಸುತ್ತಿದ್ದಾರೆ.ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿ ಕೋಗಿಲು ಅವರು ಈ ಚಿತ್ರ ನಿರ್ಮಿಸಿದ್ದಾರೆ.

ಮಲೇಶಿಯಾದಲ್ಲಿ ಒಂದು ಹಾಡನ್ನು ಚಿತ್ರೀಕರಿಸಿದ್ದು ಉಳಿದ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರಿನಲ್ಲಿ ನಡೆದಿದೆ. ವಿ. ರಘುಶಾಸ್ತ್ರಿ ಅವರ ನಿರ್ದೇಶನದ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ವಿಲಿಯಮ್ಸ್ ಡೇವಿಡ್ ಅವರ ಛಾಯಾಗ್ರಹಣವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.