ADVERTISEMENT

PHOTOS | ಮೈಸೂರು ಸ್ಯಾಂಡಲ್‌ ಸೋಪ್ ರಾಯಭಾರಿ ತಮನ್ನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 12:38 IST
Last Updated 10 ಫೆಬ್ರುವರಿ 2026, 12:38 IST
   
<div class="paragraphs"><p>ಕೃಪೆ:&nbsp;ಇನ್‌ಸ್ಟಾಗ್ರಾಂ&nbsp;</p></div>

ಮಂಗಳವಾರ ನಟಿ ತಮನ್ನಾ ಭಾಟಿಯಾ ಅವರು ಬೆಂಗಳೂರಿನಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್‌ ಫ್ಯಾಕ್ಟರಿಗೆ ಭೇಟಿ ನೀಡಿದ್ದರು.

ರಾಯಭಾರಿಯಾಗಲು ತಮನ್ನಾ ಅವರಿಗೆ ಎರಡು ವರ್ಷ ಎರಡು ದಿನಕ್ಕೆ ₹6.20 ಕೋಟಿ ಸಂಭಾವನೆ ನೀಡಲಾಗಿದೆ.

108 ವರ್ಷಗಳ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್‌ನ ವಹಿವಾಟು 2030ರ ವೇಳೆಗೆ ₹5,000 ಕೋಟಿ ತಲುಪುವ ಗುರಿ ಇದೆ.

ADVERTISEMENT

ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಆದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು.

ದೇಶ ಹಾಗೂ ಜಾಗತಿಕ ಮಾರುಕಟ್ಟೆಯ ತಂತ್ರಗಾರಿಕೆ ಭಾಗವಾಗಿ ಮಾರುಕಟ್ಟೆ ಪರಿಣಿತರ ಸಮಿತಿಯು ರಾಯಭಾರಿ ಆಯ್ಕೆ ಮಾಡಿಕೊಂಡಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

2024–25ನೇ ಸಾಲಿನಲ್ಲಿ ಕೆಎಸ್‌ಡಿಎಲ್‌ ₹1,785 ಕೋಟಿ ವಹಿವಾಟು ನಡೆಸಿದೆ. ಈ ವ್ಯವಹಾರದಲ್ಲಿ ಕರ್ನಾಟಕದ ಪಾಲು ಶೇ 18. ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.