ADVERTISEMENT

ಬೆಳಗ್ಗೆ 4.30ಕ್ಕೆ ನನ್ನ ದಿನಚರಿ ಆರಂಭ: ಫಿಟ್‌ನೆಸ್ ರಹಸ್ಯ ತಿಳಿಸಿದ ನಟಿ ತಮನ್ನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2025, 7:52 IST
Last Updated 9 ಅಕ್ಟೋಬರ್ 2025, 7:52 IST
   

ಇತ್ತೀಚಿನ ದಿನಗಳಲ್ಲಿ ದೇಹವನ್ನು ಫಿಟ್ ಆಗಿರಿಸಿಕೊಳ್ಳುವುದಕ್ಕೆ ನಟರು ಮಾತ್ರವಲ್ಲ, ನಟಿಯರೂ ಕೂಡ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಸಿನಿ ತಾರೆಯರು ಫಿಟ್‌ನೆಸ್‌ಗೆ ಅತೀ ಹೆಚ್ಚಿನ ಒತ್ತು ನೀಡುತ್ತಾರೆ. ಸದ್ಯ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಫಿಟ್‌ನೆಸ್ ಕುರಿತು ಯೂಟ್ಯೂಬ್ ಬ್ಲಾಗರ್ ಒಬ್ಬರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನನ್ನ ದಿನಚರಿ ಪ್ರತಿದಿನ ಬೆಳ್ಳಗ್ಗೆ 4.30 ಆರಂಭವಾಗುತ್ತದೆ. ಶೂಟಿಂಗ್ ಇಲ್ಲದಿದ್ದರೇ 8 ಗಂಟೆಗಳ ಕಾಲ ವರ್ಕೌಟ್ ಮಾಡುತ್ತೇನೆ. ಬೆಳಗ್ಗಿನ ಸಮಯದಲ್ಲಿ ವ್ಯಾಯಾಮ, ಯೋಗ ಮಾಡುವುದರಿಂದ ದೇಹವು ಉಲ್ಲಾಸದಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ’ ಎಂದು ಮಿಲ್ಕಿ ಬ್ಯೂಟಿ ತಮನ್ನಾ ಹೇಳಿಕೊಂಡಿದ್ದಾರೆ.

ದೇಹ ಸದೃಢತೆಗೆ ಏನಾದರೂ ಮಂತ್ರ ಇದೀಯಾ ಎಂದು ಬ್ಲಾಗರ್ ಕೇಳಿದಾಗ, ಅದಕ್ಕೆ ಅವರು ದೇಹ ಫಿಟ್ ಆಗಿರಲು ಡಯಟ್, ಪ್ರತಿನಿತ್ಯ ವರ್ಕೌಟ್ ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.