ಚಿತ್ರ ಕೃಪೆ: Anupam Kher@A
ನಟಿ ಶುಭಾಂಗಿ ದತ್ ನಟನೆಯ ‘ತನ್ವಿ ದಿ ಗ್ರೇಟ್’ ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿ (FIPRESCI)ದೊರಕಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಅನುಪಮ್ ಖೇರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಶಸ್ತಿ ಕುರಿತು ಮಾಹಿತಿ ಹಂಚಿಕೊಂಡಿರುವ ಅನುಪಮ್ ಖೇರ್, 'ಮುಂಬೈನಲ್ಲಿ ನಡೆದ ಜಾಗ್ರಣ್ ಚಲನಚಿತ್ರೋತ್ಸವದಲ್ಲಿ ‘ತನ್ವಿ ದಿ ಗ್ರೇಟ್’ ಚಿತ್ರವು ‘ಅತ್ಯುತ್ತಮ ಸಿನಿಮಾ’ ವಿಭಾಗದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ಪಡೆದುಕೊಂಡಿದೆ. ಜಾಗತಿಕ ಮಟ್ಟದ ವಿಮರ್ಶಕರು ಮತ್ತು ಪತ್ರಕರ್ತರು ಈ ಪ್ರಶಸ್ತಿಯನ್ನು ನೀಡುತ್ತಾರೆ. ಚಿತ್ರ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ನಟಿ ಶುಭಾಂಗಿ ಅವರಿಗೆ ಶುಭ ಹಾರೈಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ತನ್ವಿ ಎಂಬ ಯುವತಿ ತನ್ನ ತಂದೆಯ ಕನಸ್ಸನ್ನು ನನಸು ಮಾಡಲು ಹೊರಟಾಗ, ಆ ಪ್ರಯಾಣದ ಉದ್ದಕ್ಕೂ ಎದುರಿಸುವ ಸಂಕಷ್ಟವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ತನ್ವಿ ಪಾತ್ರಧಾರಿಯಾಗಿ ನಟಿ ಶುಭಾಂಗಿ ದತ್ ಕಾಣಿಸಿಕೊಂಡಿದ್ದಾರೆ.
ಅನುಪಮ್ ಖೇರ್ ಅವರು, ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಕೀರವಾಣಿ ಅವರು ಸಂಗೀತ ಸಂಯೋಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.