ADVERTISEMENT

ಹೊಸ ವರ್ಷಕ್ಕೆ ಗೃಹಪ್ರವೇಶದ ಸಂಭ್ರಮದಲ್ಲಿ ತರುಣ್ ಸುಧೀರ್ ದಂಪತಿ: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 12:59 IST
Last Updated 1 ಜನವರಿ 2026, 12:59 IST
<div class="paragraphs"><p>ತರುಣ್ ಸುಧೀರ್, ಸೋನಲ್‌ ಮೊಂತೆರೋ ದಂಪತಿ&nbsp;</p></div>

ತರುಣ್ ಸುಧೀರ್, ಸೋನಲ್‌ ಮೊಂತೆರೋ ದಂಪತಿ 

   

ಚಿತ್ರ: ಇನ್‌ಸ್ಟಾಗ್ರಾಂ

ನಟ, ಬರಹಗಾರ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂತೆರೋ ದಂಪತಿ ಹೊಸ ವರ್ಷಕ್ಕೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಗೃಹಪ್ರವೇಶದ ವಿಡಿಯೊವನ್ನು ನಟಿ ಸೋನಲ್‌ ಮೊಂತೆರೋ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ತರುಣ್ ಸುಧೀರ್, ಸೋನಲ್‌ ಮೊಂತೆರೋ ದಂಪತಿ 

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಂಡಿರುವುದರ ಜೊತೆಗೆ ‘ಕನಸು ತುಂಬಿದ ಮನಸ್ಸಿನೊಂದಿಗೆ ನಮ್ಮ ಹೊಸ ಮನೆಯಲ್ಲಿ ಈ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಇದೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ವಿಶೇಷ ಏನೆಂದರೆ ಹೊಸ ವರ್ಷದಂದು ಸ್ಟಾರ್ ದಂಪತಿ ಗೃಹಪ್ರವೇಶ ಮಾಡಿದ್ದಾರೆ. ಇನ್ನು ವಿಡಿಯೊದಲ್ಲಿ ಹೊಸ ಮನೆಯ ಅದ್ಭುತ ವಿನ್ಯಾಸವನ್ನು ಅನಾವರಣಗೊಳಿದ್ದಾರೆ. ಈ ಗೃಹಪ್ರವೇಶದ ಸಂಭ್ರಮದಲ್ಲಿ ಸೋನಲ್‌ ಮೊಂಥೆರೋ ಕುಟುಂಬಸ್ಥರು, ಚಿತ್ರರಂಗದ ಹಲವು ಗಣ್ಯರು, ನಟ ಶರಣ್‌ ಹಾಗೂ ಶೃತಿ ಕುಟುಂಬ ಭಾಗವಹಿಸಿ ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.