ADVERTISEMENT

ತಮಿಳು ನಟ ಅಜಿತ್ ಆಸ್ಪತ್ರೆ ಭೇಟಿ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 23 ಮೇ 2020, 6:46 IST
Last Updated 23 ಮೇ 2020, 6:46 IST
   

ಚೆನ್ನೈ: ತಮಿಳು ನಟ ಅಜಿತ್,‌ ಪತ್ನಿ ಶಾಲಿನಿಯೊಂದಿಗೆಆಸ್ಪತ್ರೆಗೆ ಭೇಟಿನೀಡಿರುವುದು ಕಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾಸ್ಕ್‌ ಧರಿಸಿ ಇಬ್ಬರು ಆಸ್ಪತ್ರೆಗೆ ಬಂದಿದ್ದಾರೆ. ಅಜಿತ್ ಫ್ಯಾನ್‌ ಅಸೋಸಿಯೆಶನ್‌ ನವರು ಅಜಿತ್‌ ಮತ್ತು ಶಾಲಿನಿ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದು ಅಭಿಮಾನಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ.

ಇಲ್ಲಿನ ಅಪೋಲ್‌ ಆಸ್ಪತ್ರೆಗೆ ಅಜಿತ್ ಭೇಟಿ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ADVERTISEMENT

ಅಜಿತ್ ಮತ್ತು ಶಾಲಿನಿ ಜನರಲ್‌ ಚಕ್‌ಅಪ್‌ಗೆಬಂದಿದ್ದರು ಎಂದು ಅವರ ಆಪ್ತವಲಯದ ಮೂಲಗಳು ಖಚಿಪಡಿಸಿವೆ.

ಇನ್ನು ಕೆಲವರು ಅಜಿತ್‌ ತಂದೆ ಅಪೋಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದು ಅವರನ್ನು ನೋಡಲು ಬಂದಿದ್ದಾರೆ ಎಂದುಟ್ವೀಟ್ ಮಾಡಿದ್ದಾರೆ. ಆದರೆ ಈ ಮಾಹಿತಿ ಇನ್ನುಅಧಿಕೃತವಾಗಿಲ್ಲ.

ಮೇ 1ರಂದು ಅಜಿತ್ 49ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.