ADVERTISEMENT

ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ, ಮಗನಿಂದಲೂ ದೂರವಾಗ್ತಾರಾ ದಳಪತಿ ವಿಜಯ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 8:59 IST
Last Updated 2 ಮಾರ್ಚ್ 2026, 8:59 IST
<div class="paragraphs"><p>ವಿಜಯ್, ಜೇಸನ್ ಸಂಜಯ್  </p></div>

ವಿಜಯ್, ಜೇಸನ್ ಸಂಜಯ್

   

ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಕೆ ಬೆನ್ನಲೇ, ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ತಂದೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿದ್ದಾರೆ. ಮಾತ್ರವಲ್ಲ, ತಂದೆ–ತಾಯಿ ಜೊತೆಗಿನ ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ. 

ADVERTISEMENT

ಜೇಸನ್ ಸಂಜಯ್

ಈ ಕುರಿತು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ  ಜೇಸನ್ ಸಂಜಯ್ ಅವರಿಗೆ,‘ ಅಪ್ಪ– ಅಮ್ಮನನ್ನು ಒಂದು ಮಾಡಿ, ತಾಯಿ ಸಂಗೀತಾ ಪರ ನಿಲ್ಲಿ, ‘ವಿಜಯ್ ನಮ್ಮ ನೆಚ್ಚಿನ ನಟ ಅವರನ್ನು ಕೈ ಬಿಡಬೇಡಿ’ ಸೇರಿದಂತೆ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ಹಾಗೂ ಸಂಗೀತಾ ಜೋಡಿಗೆ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಸದ್ಯ,  ಜೇಸನ್ ಸಂಜಯ್ ಅವರು ಸಿಗ್ಮಾ (SIGMA) ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.