
ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ‘ಮಾದಪ್ಪನ ’ ಹಾಡು ಇಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಹಾಡಿನ ವಿಡಿಯೊ ತುಣುಕು ಅನ್ನು ಹಂಚಿಕೊಂಡ ಚಿತ್ರತಂಡ , ‘ ಇದು ಕೇವಲ ಕಿಡಿ.. ಜ್ವಾಲೆ ಪೂರ್ಣ ಹಾಡಿನಲ್ಲಿ ಇದೆ ಎಂದು ಬರೆದುಕೊಂಡಿದೆ. ಮಾದಪ್ಪನನ್ನು ಬರಮಾಡಿಕೊಳ್ಳುವ ಜನಪದ ಸೊಗಡಿನ ಹಾಡಾಗಿದೆ.
ವ್ಯಾಪಾರಿ ಮತ್ತು ಕೆಲಸಗಾರರ ನಡುವಿನ ಕಥೆ. ರೆಟ್ರೊ ಶೈಲಿಯ ಕಥೆಯಾಗಿದ್ದು ಇದು ರೌಡಿಸಂ ಕಥೆಯಲ್ಲ. ಕ್ರಾಂತಿಕಾರಿ ಅಶೋಕನ ಕಥೆ. ವ್ಯಾಪಾರಿಗಳು ಕೂಲಿ ಕೆಲಸಗಾರರ ಮೇಲೆ ದಬ್ಬಾಳಿಕೆ ಮಾಡುವುದು ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಅದರ ವಿರುದ್ಧ, ಜೀತವನ್ನು ಪ್ರತಿಭಟಿಸಿ ಬಂಡೇಳುವ ನಾಯಕನ ಕಥೆ ಇದಾಗಿದೆ.
ಈ ಚಿತ್ರವನ್ನು ಮನು ಶೆಡ್ಡಾರ್ ಅವರು ನಿರ್ದೇನ ಮಾಡುತ್ತಿದ್ದು, ಛಾಯಾಚಿತ್ರಗ್ರಹಣ ಲವಿತ್, ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.