ADVERTISEMENT

‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್ ಬಿಡುಗಡೆ: ಪ್ರೇಕ್ಷಕರ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 12:14 IST
Last Updated 19 ಫೆಬ್ರುವರಿ 2026, 12:14 IST
<div class="paragraphs"><p>ದಿ ರೈಸ್ ಆಫ್ ಅಶೋಕ</p></div>

ದಿ ರೈಸ್ ಆಫ್ ಅಶೋಕ

   

ಸತೀಶ್ ನೀನಾಸಂ ಹಾಗೂ ಸಪ್ತಮಿಗೌಡ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್ ಫೆ.18ರಂದು ಗುರುವಾರ ಬಿಡುಗಡೆಯಾಗಿದೆ. ಈ ಚಿತ್ರವು ಫೆ.27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದ ಟ್ರೇಲರ್ ಅನ್ನು ಚಂದನವನದ ತಾರೆಯರಾದ ನಟ ರವಿಚಂದ್ರನ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್, ಡಾಲಿ ಧನಂಜಯ್, ಯೋಗೆಶ್, ದಿಗಂತ್, ಡಾರ್ಲಿಂಗ್ ಕೃಷ್ಣಾ, ವಸಿಷ್ಠ ಸಿಂಹ, ನಾಗಭೂಷಣ್, ಶಿವರಾಜ್‌ ಕೆ.ಆರ್‌.ಪೇಟೆ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಬಿಡುಗಡೆಗೊಂಡ ಟ್ರೇಲರ್‌ನಲ್ಲಿ, ‘ಜಾತಿ ತಾರತಮ್ಯ, ದಬ್ಬಾಳಿಕೆ, ಜೀತ ಪದ್ಧತಿ, ಬಡತನದಿಂದ ಬೇಸತ್ತ ಅಶೋಕನು ಸರ್ಕಾರಿ ಅಧಿಕಾರಿಯಾಗಿ ಊರಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಕನಸು ಕಂಡಿರುತ್ತಾನೆ. ಅದರಂತೆಯೇ ಅಶೋಕ ಪರೀಕ್ಷೆ ಬರೆದು ಕಂದಾಯ ಅಧಿಕಾರಿಯಾಗಿ ನೇಮಕಗೊಳ್ಳುತ್ತಾನೆ‘.

ಕಂದಾಯ ಅಧಿಕಾರಿ ಅಶೋಕ ಬೇರೆ ಊರಿಗೆ ವರ್ಗಾವಣೆಯಾದ ಬಳಿಕ ಅವನ ಕುಟುಂಬ ಸದಸ್ಯರಿಗೆ ಪಾಳೇಗಾರ ಚಿತ್ರಹಿಂಸೆ ನೀಡಲು ಮುಂದಾಗುತ್ತಾರೆ. ಇದರಿಂದ ಕೋಪಗೊಂಡ ಅಶೋಕ, ಊರಿನ ಪಾಳೇಗಾರನ ವಿರುದ್ಧ ನಡೆಸುವ ಹೋರಾಟವನ್ನು ಚಿತ್ರದ ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಮನು ಶೆಡ್ಗಾರ್ ನಿರ್ದೇಶನದ ಈ ಚಿತ್ರವನ್ನು ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.