ADVERTISEMENT

ಹೀಗಿದೆ ವೋಗ್‌ ಮ್ಯಾಗಜಿನ್‌ಗೆ ಅನುಷ್ಕಾ ಶರ್ಮಾ ನೀಡಿದ ಪೋಸ್‌!

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 9:48 IST
Last Updated 31 ಡಿಸೆಂಬರ್ 2020, 9:48 IST
ವೋಗ್‌ ಮ್ಯಾಗಜಿನ್‌ ಕವರ್‌ ಫೋಟೊ (ಚಿತ್ರ: ಅನುಷ್ಕಾ ಇನ್‌ಸ್ಟಾಗ್ರಾಂ ಖಾತೆಯಿಂದ)
ವೋಗ್‌ ಮ್ಯಾಗಜಿನ್‌ ಕವರ್‌ ಫೋಟೊ (ಚಿತ್ರ: ಅನುಷ್ಕಾ ಇನ್‌ಸ್ಟಾಗ್ರಾಂ ಖಾತೆಯಿಂದ)   

ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಇನ್ನೇನು ಕೆಲ ದಿನಗಳಲ್ಲಿ ಅಪ್ಪ‍–ಅಮ್ಮ ಆಗಲಿದ್ದಾರೆ. ತುಂಬು ಗರ್ಭಿಣಿ ಅನುಷ್ಕಾ ಇತ್ತೀಚೆಗೆ ವೋಗ್ ಇಂಡಿಯಾ ಮ್ಯಾಗಜಿನ್‌ಗೆ ಫೋಸ್ ನೀಡಿದ್ದಾರೆ. ಈ ಫೋಟೊ ಈಗ ವೈರಲ್ ಆಗಿದೆ.

ತಾನು ಗರ್ಭವತಿಯಾದಾಗಿನಿಂದ ಇಲ್ಲಿಯವರೆಗಿನ ಪಯಣ, ಮಗುವಿನ ಕುರಿತು ತಮ್ಮ ನಿರೀಕ್ಷೆ, ಸ್ನೇಹಿತೆಯರ ಸಹಕಾರ ಈ ಎಲ್ಲಾ ವಿಷಯಗಳ ಕುರಿತು ಅನುಷ್ಕಾ ಮ್ಯಾಗಜಿನ್ ಜೊತೆ ಮಾತನಾಡಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅನುಷ್ಕಾ ‘ವೋಗ್‌ ಇಂಡಿಯಾಗಾಗಿ ಸೆರೆ ಹಿಡಿದ ದೃಶ್ಯವಿದು, ನಿಜಕ್ಕೂ ಮಜಾವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.