ADVERTISEMENT

ನಾಗಾರ್ಜುನ ಜೊತೆ ರಾಕುಲ್ ರೊಮ್ಯಾನ್ಸ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:45 IST
Last Updated 28 ಜುಲೈ 2019, 19:45 IST
ರಕುಲ್ ಪ್ರೀತ್ ಸಿಂಗ್
ರಕುಲ್ ಪ್ರೀತ್ ಸಿಂಗ್   

ಟಾಲಿವುಡ್‌ನ ಹ್ಯಾಂಡ್‌ಸಮ್ ಹೀರೊ ಅಕ್ಕಿನೇನಿ ನಾಗರ್ಜುನ ಹಾಗೂ ಉತ್ತರದ ಚೆಲುವೆ ರಕುಲ್ ಪ್ರೀತ್ ಸಿಂಗ್ ಅಭಿಯನದ ’ಮನ್ಮತುಡು 2’ ಸಿನಿಮಾ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ.

ಸ್ಯಾಂಡಲ್‌ವುಡ್‌ನ ‘ಗಿಲ್ಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಕುಲ್‌ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಮಿಂಚಿದವರು. ತೆಲುಗಿನ ಸ್ಟಾರ್ ನಟರ ಜೊತೆ ಡ್ಯುಯೆಟ್ ಹಾಡಿದ್ದ ಈ ಸುಂದರಿ ಇತ್ತೀಚೆಗೆ ಅಷ್ಟೊಂದು ಸುದ್ದಿಯಲ್ಲಿರಲಿಲ್ಲ. ‌ಈಗ ಮತ್ತೆ ಮನ್ಮತುಡು 2 ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವ ಇವರು, 60 ವರ್ಷದ ನಟ ನಾಗರ್ಜುನ ಅವರ ಜೊತೆ ರೊಮ್ಯಾನ್ಸ್ ಮಾಡಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎನ್ನುವ ಮೂಲಕ ಬಾಂಬ್ ಸಿಡಿಸಿದ್ದಾರೆ.

2017ರಲ್ಲಿ ಬಿಡುಗಡೆಯಾದ ‘ರಾರಂಡೋಯ್‌ ವೇಡುಕ ಚೂದ್ದಾಂ’ ಸಿನಿಮಾದಲ್ಲಿ ನಾಗರ್ಜುನ ಪುತ್ರ ನಾಗ ಚೈತನ್ಯ ಜೊತೆ ಈ ಸುಂದರಿ ರೊಮ್ಯಾನ್ಸ್ ಮಾಡಿದ್ದರು. ಹೀಗಿದ್ದೂ ರಕುಲ್‌ ನಾಗರ್ಜುನ ಜೊತೆ ಮನ್ಮತುಡು 2 ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದರು.

ADVERTISEMENT

ಈ ಸಿನಿಮಾಕ್ಕೆ ಇವರು ಬರೋಬ್ಬರಿ ₹1.55 ಕೋಟಿ ಸಂಭಾವನೆ ಪಡೆದಿದ್ದಾರೆ. ಇತ್ತೀಚೆಗೆ ಕುಗ್ಗುತಿರುವ ಈ ನಟಿಯ ಜನಪ್ರಿಯತೆಯನ್ನು ಗಮನಿಸಿದರೆ ಇದು ತುಂಬಾ ದೊಡ್ಡ ಮೊತ್ತ ಎಂಬುದು ಟಾಲಿವುಡ್ ಮಂದಿಯ ಮಾತು. ಸ್ಲೈಡರ್ ಸಿನಿಮಾದ ಸೋಲಿನ ನಂತರ ಇವರಿಗೆ ತೆಲುಗಿನ ಯಾವುದೇ ಸಿನಿಮಾಗಳಲ್ಲೂ ಆಫರ್ ಬಂದಿರಲಿಲ್ಲ. ಮನ್ಮತುಡು 2 ಸಿನಿಮಾ ತನ್ನ ಪಾಲಿಗೆ ಮತ್ತೆ ಅದೃಷ್ಟದ ಬಾಗಿಲು ತೆರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರಕುಲ್‌.

ಅದರೊಂದಿಗೆ ಈ ಸಿನಿಮಾ ಟ್ರೇಲರ್ ಅನ್ನು ಜನ ಮೆಚ್ಚಿದ್ದು ಅಲ್ಲದೇ ಬಿಡುಗಡೆಯಾದ ದಿನದಿಂದಲೂ ಯುಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.

ರಾಹುಲ್ ರವೀಂದ್ರ ನಿರ್ದೇಶನದ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾದಲ್ಲಿ ನಾಗಾರ್ಜುನ ತುಂಬಾ ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.