ಬೆಂಗಳೂರು: ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಮುಂಚೂಣಿ ತಾಣದಲ್ಲಿರುವ ‘ಪೋರ್ನ್ ಹಬ್’ನ ಮುಖ್ಯಸ್ಥರು ಫ್ರಾನ್ಸ್ ಸರ್ಕಾರದ ಆಡಳಿತಗಾರರ ವಿರುದ್ಧ ಕೆಂಡ ಕಾರಿದೆ.
ಇದಕ್ಕೆ ಕಾರಣ ಏನೆಂದರೆ, ಫ್ರಾನ್ಸ್ ಸರ್ಕಾರ ತನ್ನ ದೇಶದಲ್ಲಿ ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ಮಾಡುವವರು ಇನ್ಮುಂದೆ ಸರ್ಕಾರದ ಮಾನ್ಯತಾ ಗುರುತಿನ ಚೀಟಿಗಳ ಅನ್ವಯ ವಯಸ್ಸಿನ ಗುರುತನ್ನು ನಮೂದಿಸಿಯೇ ವೀಕ್ಷಣೆ ಮಾಡಬೇಕು ಎಂಬ ಕಾನೂನನ್ನು ಇತ್ತೀಚೆಗೆ ತಂದಿದೆ.
ಇದಕ್ಕೆ ‘ಬ್ರಾಜರ್ಸ್’, ‘ಪೋರ್ನ್ ಹಬ್’, ‘ಯೂ ಪೋರ್ನ್’, ‘ರೆಡ್ ಟ್ಯೂಬ್’ ಎಂಬ ಅಶ್ಲೀಲ ತಾಣಗಳನ್ನು ಮುನ್ನಡೆಸುವ ಕಂಪನಿ Aylo, ‘ಇದು ಅತ್ಯಂತ ಮೂರ್ಖತನದ ನಿರ್ಧಾರ. ಅಶ್ಲೀಲ ವೆಬ್‌ಸೈಟ್‌ನಲ್ಲಿ ವಯಸ್ಕರ ಚಿತ್ರಗಳನ್ನು ವೀಕ್ಷಿಸಬೇಕು ಎನ್ನುವನ ಗುರುತಿನ ಚೀಟಿಗಳನ್ನು ಪಡೆಯುವುದಾದರೆ ಡೇಟಾ ಸುರಕ್ಷೆ ಎಲ್ಲಿದೆ? ನಟರು, ಹ್ಯಾಕರ್‌ಗಳು ಈ ಡೇಟಾಗಳನ್ನು ಖಂಡಿತವಾಗಿಯೂ ದುರುಪಯೋಗ ಮಾಡುತ್ತಾರೆ‘ ಎಂದು ಟೀಕಿಸಿದೆ.
ಇಂದು ವಿಡಿಯೊ ಕಾಲ್ ಸುದ್ದಿಗೋಷ್ಠಿಯಲ್ಲಿ Aylo ಕಂಪನಿಯ ಮುಖ್ಯಸ್ಥರು, ಸಹ ಹೂಡಿಕೆದಾರರು ಫ್ರಾನ್ಸ್ ಸರ್ಕಾರದ ಕಾನೂನನ್ನು ಒಕ್ಕೂರಲಿನಿಂದ ವಿರೋಧಿಸಿದ್ದಾರೆ. ಇತರರು ನಿಮ್ಮ ನಡೆ ಅನುಸರಿಸಬಹುದು. ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಯಸ್ಕ ವ್ಯಕ್ತಿಯ ಖಾಸಗಿತನವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈಗಾಗಲೇ ಆ್ಯಪಲ್, ಗೂಗಲ್, ಮೈಕ್ರೊಸಾಫ್ಟ್‌ನಂತಹ ಆಪರೇಟಿಂಗ್ ಸಿಸ್ಟಮ್ ಕಂಪನಿಗಳು ವಯಸ್ಸಿನ ದೃಢೀಕರಣವನ್ನು ಮೊದಲೇ ಮಾಡಿರುತ್ತವೆ. ಇದಕ್ಕಾಗಿ ಪ್ರತ್ಯೇಕವಾಗಿ ಕಾನೂನು ತರುವುದು ಸೂಕ್ತ ಅಲ್ಲ ಎಂದು ಖಂಡಿಸಿದ್ದಾರೆ.
ಆದರೆ, ಮಾಧ್ಯಮಗಳಿಗೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫ್ರಾನ್ಸ್‌ನ ಡಿಜಿಟಲ್ ವ್ಯವಹಾರಗಳ ಸಚಿವೆ, ಕ್ಲಾರಾ ಚಪ್ಪಾಜ್ ಅವರು, ‘ಅವರು ಏನಾದರೂ ಹೇಳಲಿ ಬಿಡಿ, ನಮ್ಮ ಕಾನೂನುಗಳನ್ನು ಅವರು ಗೌರವಿಸಲೇಬೇಕು’ ಎಂದು ಹೇಳಿರುವುದಾಗಿ ಫ್ರಾನ್ಸ್ 24.ಕಾಮ್ ವೆಬ್‌ಸೈಟ್ ವರದಿ ಮಾಡಿದೆ.
Aylo ಕಂಪನಿಯು ಅಶ್ಲೀಲ ವೆಬ್‌ಸೈಟ್‌ಗಳನ್ನು, ವಯಸ್ಕರರ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳನ್ನು ಮುನ್ನಡೆಸುವ ಕೆನಡಾ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದೆ. ನೀಲಿಚಿತ್ರಗಳ ಜಗತ್ತಿನಲ್ಲಿ ಬಹುಪಾಲು ಆದಾಯ ಈ ಕಂಪನಿಯದ್ದೇ.
ಮಕ್ಕಳು ವಯಸ್ಕರ ತಾಣಗಳನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲು ಹೊಸ ಕಾನೂನನ್ನು ಫ್ರಾನ್ಸ್ ಸರ್ಕಾರ ತರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.