
ಯಶ್
ಚಿತ್ರ: ಇನ್‌ಸ್ಟಾಗ್ರಾಂ
ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರತಂಡ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟಿಸುತ್ತಿರುವ ಪಾತ್ರದ ಹೆಸರನ್ನು ವಿಡಿಯೊ ಮೂಲಕ ಬಹಿರಂಗಪಡಿಸಲಾಗಿತ್ತು.
ಟಾಕ್ಸಿಕ್
ಟಾಕ್ಸಿಕ್ ವಿಡಿಯೊ ಬಿಡುಗಡೆಯಾಗಿ ನಾಲ್ಕು ದಿನಗಳ ಬಳಿಕ ಯ್ಯೂಟೂಬ್‌ನಲ್ಲಿ 8.4 ಕೋಟಿ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಅಲ್ಲದೆ ರಿಲೀಸ್ ಆದ ಟಾಕ್ಸಿಕ್ ಸಿನಿಮಾದ ವಿಡಿಯೊದಲ್ಲಿರುವ ಹಸಿಬಿಸಿ ದೃಶ್ಯಗಳು ಸಂಚಲನ ಸೃಷ್ಟಿಸಿದ್ದವು. ಹೀಗಾಗಿ ವಿಡಿಯೊದಿಂದ ದೃಶ್ಯವನ್ನು ತೆಗೆಯುವಂತೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಒತ್ತಾಯಿಸಿದೆ.
ಟಾಕ್ಸಿಕ್ ವಿಡಿಯೊದಲ್ಲಿರುವ ಅಶ್ಲೀಲ ದೃಶ್ಯಗಳು ಹೆಂಗಳೆಯರ, ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಕನ್ನಡ ಸಾಂಸ್ಕೃತಿಕ ಜಗತ್ತಿಗೂ ಅಪಮಾನವಾಗುತ್ತಿದೆ. ಈ ಕಾರಣದಿಂದ ಕೂಡಲೇ ಈ ಟೀಸರ್ ಅನ್ನು ರದ್ದು ಮಾಡುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದಿಂದ ದೂರು ಸಲ್ಲಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.